ಬೆಂಗಳೂರು: ಪರಮ್ ಫೌಂಡೇಷನ್ ಇಂದು ಬೆಂಗಳೂರಿನಲ್ಲಿ 30,000 ಚದರ ಅಡಿ ವಿಸ್ತೀರ್ಣದ ಅನುಭವಪೂರ್ವಕ ವಿಜ್ಞಾನ ಮತ್ತು ಆವಿಷ್ಕಾರ ಕೇಂದ್ರ ಪಾರ್ಸೆಕ್ ವೈಟ್ಫೀಲ್ಡ್ ಡಾ.ಕೆ. ರಾಧಾಕೃಷ್ಣನ್ (ಇಸ್ರೋ ಮಾಜಿ ಅಧ್ಯಕ್ಷರು ಮತ್ತು ಪರಮ್ ಫೌಂಡೇಷನ್ ಸಲಹಾ ಮಂಡಳಿಯ ಅಧ್ಯಕ್ಷರು) ಮತ್ತು ಕ್ರಿಸ್ ಗೋಪಾಲಕೃಷ್ಣನ್ (ಇನ್ಫೋಸಿಸ್ ಸಹ-ಸಂಸ್ಥಾಪಕರು) ಶಿಕ್ಷಕರು, ವಿಜ್ಞಾನಿಗಳು, ಉದ್ಯಮದ ನಾಯಕರು ಮತ್ತು ಸಾರ್ವಜನಿಕರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಇದು ನಗರದ ವೃದ್ಧಿಸುತ್ತಿರುವ ವಿಜ್ಞಾನದ ಸಕ್ರಿಯತೆ ಮತ್ತು ಭವಿಷ್ಯ-ಕೇಂದ್ರಿತ ಕಲಿಕಾ ತಾಣಗಳಿಗೆ ಪ್ರಮುಖ ಸೇರ್ಪಡೆಯಾಗಿದೆ. ಅನ್ವೇಷಣೆಗೆ “ಲಿವಿಂಗ್ ಲ್ಯಾಬ್” ಎಂಬ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಲಾಗಿದೆ.
ವಿಜ್ಞಾನ, ಅನ್ವೇಷಣೆ ಮತ್ತು ಆವಿಷ್ಕಾರಗಳಿಗೆ ವಿಶೇಷ ಸ್ಥಳವನ್ನು ಹೊಂದಿರುವ ಪಾರ್ಸೆಕ್ ವೈಟ್ಫೀಲ್ಡ್ ಹೇಗೆ ನಗರವು ವಿಜ್ಞಾನ ಮತ್ತು ಆವಿಷ್ಕಾರವನ್ನು ಸಾಂಪ್ರದಾಯಿಕ ಶೈಕ್ಷಣಿಕ ಗಡಿಗಳ ಆಚೆಗೂ ಅನುಭವಿಸುತ್ತದೆ ಎನ್ನುವುದನ್ನು ಪರಿವರ್ತಿಸುವ ನಿರೀಕ್ಷೆ ಹೊಂದಿದೆ. ಈ ಕೇಂದ್ರವು ವೈಜ್ಞಾನಿಕ ಪರಿಶೋಧನೆಯು ಎಲ್ಲ ವಯಸ್ಸಿನ ಶಿಕ್ಷಣಾರ್ಥಿಗಳಿಗೆ ಲಭ್ಯ ಮತ್ತು ಸಕ್ರಿಯವಾಗಿಸುವ ಧ್ಯೇಯವನ್ನು ಬಿಂಬಿಸುತ್ತದೆ.
ವಿಸ್ತಾರ ಸೌಲಭ್ಯದಲ್ಲಿ ಹರಡಿರುವ ಪಾರ್ಸೆಕ್ ವೈಟ್ಫೀಲ್ಡ್ ಸಂವಹನೀಯ ಗ್ಯಾಲರಿಗಳು, ಆವಿಷ್ಕಾರಕ ಮೇಕರ್ ತಾಣಗಳು, ನೇರ ಪ್ರಾತ್ಯಕ್ಷಿಕೆ ವಲಯಗಳು ಮತ್ತು ಕುತೂಹಲ ಉಂಟು ಮಾಡಲು ವಿನ್ಯಾಸಗೊಳಿಸಲಾದ ಸಹಯೋಗದ ಪರಿಸರಗಳನ್ನು ಹೊಂದಿದೆ. ಸಂದರ್ಶಕರು ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ವಿಷಯಗಳಿಂದ ಬೆಳಕು ಮತ್ತು ಆಪ್ಟಿಕ್ಸ್, ವಿದ್ಯುಚ್ಛಕ್ತಿ ಮತ್ತು ಕಾಂತೀಯತೆ, ರೇಖಾಗಣಿತ, ಡಿಸೈನ್ ಥಿಂಕಿಂಗ್ ಮತ್ತು ಪ್ರಾಚೀನ ಭಾರತೀಯ ವೈಜ್ಞಾನಿಕ ಜ್ಞಾನ ವ್ಯವಸ್ಥೆಗಳನ್ನು ಅನ್ವೇಷಿಸಬಹುದು.
ಪಾರ್ಸೆಕ್ ವೈಟ್ಫೀಲ್ಡ್ ಪ್ರಾರಂಭಿಸುವ ಮೂಲಕ ನಾವು ಬೆಂಗಳೂರನ್ನು ನಿಜಕ್ಕೂ ವಿಜ್ಞಾನ ಸಂಪರ್ಕಿತ ನಗರಿಯನ್ನಾಗಿಸುವ ಭರವಸೆಯನ್ನು ಈಡೇರಿಸುತ್ತಿದ್ದೇವೆ. ನಮ್ಮ ಗುರಿ ವಾರ್ಷಿಕ ಒಂದು ಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ತೊಡಗಿಸುವ ಮೂಲಕ ಕುತೂಹಲವನ್ನು ಸಂಭ್ರಮಿಸುವ ಮತ್ತು ವೈಜ್ಞಾನಿಕ ಮನೋಭಾವವನ್ನು ಪೋಷಿಸುವ ಸಮುದಾಯ ಕೇಂದ್ರವನ್ನು ಸೃಷ್ಟಿಸುವುದು. ಇದು ನಮ್ಮ ಅತ್ಯಂತ ದೊಡ್ಡ ಸೌಲಭ್ಯವಾಗಿದ್ದು ಕುಟುಂಬಗಳು ಮತ್ತು ವಿದ್ಯಾರ್ಥಿಗಳಿಗೆ ಜೀವನಪೂರ್ತಿ ಕಲಿಕೆಗೆ ವೇಗವರ್ಧಕವಾಗಲು ವಿನ್ಯಾಗೊಳಿಸಲಾಗಿದೆ” ಎಂದು ಪರಮ್ ಫೌಂಡೇಷನ್ ಎಕ್ಸಿಕ್ಯೂಟಿವ್ ಟ್ರಸ್ಟೀ ಶ್ರೀ ದೇವಾನಂದ ಆರ್. ಗದ್ದಂ ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರು ವಿಜ್ಞಾನವು ಸ್ಮರಣೆಯಲ್ಲಿರಿಸಿಕೊಳ್ಳಬೇಕಾದ ವಿಷಯವಲ್ಲ; ಇದು ಅನುಭವ ಪಡೆದುಕೊಳ್ಳಬೇಕಾದ ಜೀವನ ವಿಧಾನ. ಪಾರ್ಸೆಕ್ ವೈಟ್ಫೀಲ್ಡ್ ಒಂದೊಮ್ಮೆ ಉನ್ನತ ಮಟ್ಟದ ಸಂಶೋಧನಾ ಪ್ರಯೋಗಾಲಯಗಳಿಗೆ ಮೀಸಲಾದ ಪರಿಸರವನ್ನು ಒದಗಿಸುತ್ತದೆ. ಈ ಪರಿಕಲ್ಪನೆಗಳನ್ನು ಬೆಂಗಳೂರಿನ ಪ್ರತಿ ಮಗುವಿಗೂ ಲಭ್ಯವಾಗುವಂತೆ ಮಾಡುವ ಮೂಲಕ ನಾವು ಭಾರತದ ಮುಂದಿನ ತಲೆಮಾರಿನ ಬಾಹ್ಯಾಕಾಶ ಪರಿಶೋಧಕರು ಮತ್ತು ಡೀಪ್-ಟೆಕ್ ಅನ್ವೇಷಕರನ್ನು ಬೆಳೆಸಲು ಬೀಜ ಬಿತ್ತುತ್ತಿದ್ದೇವೆ ಎಂದರು.
ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಕ್ಸಿಲಾರ್ ವೆಂಚರ್ಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಹೇಳಿದ್ದು ಹೀಗೆ:
“ಬೆಂಗಳೂರಿನ ಬಹುದೊಡ್ಡ ಸಂಪತ್ತೆಂದರೆ ಅದರ ಪ್ರತಿಭೆ, ಆದರೆ ಆ ಪ್ರತಿಭೆಗೆ ನೈಜ ವಿಶ್ವದಲ್ಲಿ ಯಶಸ್ವಿಯಾಗುವ ಮುನ್ನ ಪ್ರಯೋಗ ನಡೆಸಲು ಮತ್ತು ವಿಫಲವಾಗಲು `ಆಟದ ಮೈದಾನ’ ಅಗತ್ಯವಿದೆ. ಈ 30,000 ಚದರ ಅಡಿ ಸೌಲಭ್ಯವು ಬರೀ ವಿಜ್ಞಾನ ಕೇಂದ್ರಕ್ಕಿಂತ ಹೆಚ್ಚಿನದಾಗಿದೆ. ನಮ್ಮ ಆವಿಷ್ಕಾರದ ಅರ್ಥವ್ಯವಸ್ಥೆಗೆ ಇದು ಪ್ರಮುಖ ಮೂಲಸೌಕರ್ಯವಾಗಿದೆ. ನಾವು `ವಿಜ್ಞಾನ ತಿಳಿಯುವುದರಿಂದ’ `ವಿಜ್ಞಾನ ಮಾಡುವುದರತ್ತ’ ಚಲಿಸುತ್ತಿದ್ದೇವೆ ಮತ್ತು ಅಲ್ಲಿಯೇ ನಮ್ಮ ತಂತ್ರಜ್ಞಾನ ಉದ್ಯಮದ ಭವಿಷ್ಯ ಅಡಗಿದೆ” ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಕ್ಸಿಲಾರ್ ವೆಂಚರ್ಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಹೇಳಿದರು.
ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದರಲ್ಲಿರುವ ಪಾರ್ಸೆಕ್ ವೈಟ್ಫೀಲ್ಡ್ ಅರ್ಥಪೂರ್ಣ ಕಲಿಕೆಯ ಅವಕಾಶಗಳನ್ನು ನಿರೀಕ್ಷಿಸುವ ಯಾರಿಗೇ ಆಗಲಿ ಸಂಪನ್ಮೂಲವಾಗಿ ಕೆಲಸ ಮಾಡುತ್ತದೆ. ಕಾರ್ಯಾಗಾರಗಳು, ಶಿಕ್ಷಕ ತರಬೇತಿ ಉಪಕ್ರಮಗಳು ಮತ್ತು ಆವಿಷ್ಕಾರ-ಪ್ರೇರಿತ ಚಟುವಟಿಕೆಗಳ ಮೂಲಕ ಈ ಸೌಲಭ್ಯವು ನಗರದಾದ್ಯಂತ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವ ಉತ್ತೇಜಿಸುತ್ತದೆ.
ಪರಮ್ ಫೌಂಡೇಷನ್ ಕುರಿತು
ಪರಮ್ ಫೌಂಡೇಷನ್ ವಿಜ್ಞಾನ, ಇತಿಹಾಸ, ಕಲೆ, ಸಂಸ್ಕೃತಿ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ತರುವ ಟ್ರಾನ್ಸ್ ಡಿಸಿಪ್ಲಿನರಿ ಇಕೊಸಿಸ್ಟಂ ಮತ್ತು ಸಹಯೋಗದ ಪ್ಲಾಟ್ ಫಾರಂ ಆಗಿದ್ದು ಕುತೂಹಲ ಹೊತ್ತಿಸುತ್ತದೆ ಮತ್ತು ಅರ್ಥಪೂರ್ಣ ಸಾಮಾಜಿಕ ಬದಲಾವಣೆ ಸೃಷ್ಟಿಸುತ್ತದೆ. ಈ ಫೌಂಡೇಷನ್ ಗುರಿಯು ಸಂಪರ್ಕಿತ, ನಗರ ವ್ಯಾಪ್ತಿಯ ವಿಜ್ಞಾನ ಕೇಂದ್ರಗಳ ಇಕೊಸಿಸ್ಟಂ ಸೃಷ್ಟಿಸುವುದಾಗಿದ್ದು ಅದು ಭಾರತದ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವುದೇ ಅಲ್ಲದೆ ಭವಿಷ್ಯ ಸನ್ನದ್ಧ ಕೌಶಲ್ಯಗಳನ್ನು ಪೋಷಿಸುವುದು ಮತ್ತು ಎಲ್ಲರಿಗೂ ಜೀವನಪೂರ್ತಿ ಕಲಿಕೆ ಉತ್ತೇಜಿಸುವುದಾಗಿದೆ.



