Monday, April 27, 2026
Google search engine

Homeಅಪರಾಧಎಚ್ಚರ, ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರ ದುರ್ಮರಣ!

ಎಚ್ಚರ, ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರ ದುರ್ಮರಣ!

ಮುಂಬೈ: ಮನೆಯಲ್ಲಿ ಊಟದ ನಂತರ ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ದಕ್ಷಿಣ ಮುಂಬೈನಲ್ಲಿ ನಡೆದಿದೆ.

ಇದೇ ತಿಂಗಳ ಅಂದರೆ, ಏಪ್ರಿಲ್ 25ರಂದು ಜೆಜೆ ಮಾರ್ಗ್ ನಿವಾಸದಲ್ಲಿ ನಡೆದ ಕುಟುಂಬ ಭೋಜನದ ನಂತರ ಅಬ್ದುಲ್ಲಾ (40), ಪತ್ನಿ ನಸೀನ್ (35), ಪುತ್ರಿಯರಾದ ಜೈನಾಬ್ (13) ಮತ್ತು ಆಯೇಷಾ (16) ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಕುಟುಂಬವು ಇತರ ಐದು ಅತಿಥಿಗಳೊಂದಿಗೆ ಚಿಕನ್ ಪುಲಾವ್ ತಿಂದಿದ್ದಾರೆ. ಬಳಿಕ ಮನೆಗೆ ತೆರಳಿ ಕಲ್ಲಂಗಡಿ ಸೇವಿಸಿದ್ದಾರೆ. ನಂತರ ಅವರಿಗೆಲ್ಲಾ ವಾಂತಿ ಮತ್ತು ತಲೆತಿರುಗುವಿಕೆ ಆರಂಭವಾಗಿದೆ ಸೇರಿದಂತೆ ಇತರೆ ಸಮಸ್ತೆ ಕಾಣಿಸಿಕೊಂಡಿದೆ. ಆ ಕೂಡಲೇ ದಂಪತಿ ಮತ್ತು ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನೆಲ್ಲ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೇಲ್ನೋಟಕ್ಕೆ ಕಲ್ಲಂಗಡಿ ವಿಷಪೂರಿತವಾಗಿದ್ದಿರಬಹುದು ಎನಿಸುತ್ತಿದೆ. ಏಕೆಂದರೆ ಪುಲಾವ್ ಮಾತ್ರ ತಿಂದವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಾಣಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ಕಾರಣವನ್ನು ದೃಢೀಕರಿಸಲು ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular