Monday, April 27, 2026
Google search engine

Homeದೇಶಚಲಿಸುತ್ತಿದ್ದ ರೈಲಿನಿಂದ ಹೊರಗೆ ಬಿದ್ದ ಮಗು.. ಚೈನ್ ಎಳೆದರೂ ನೋ ಯೂಸ್​

ಚಲಿಸುತ್ತಿದ್ದ ರೈಲಿನಿಂದ ಹೊರಗೆ ಬಿದ್ದ ಮಗು.. ಚೈನ್ ಎಳೆದರೂ ನೋ ಯೂಸ್​

ಕೋಲ್ಕತಾ: ಭಾರತೀಯ ರೈಲಿನಲ್ಲಿ ನಿತ್ಯ ಕೋಟ್ಯಾಂತರ ಮಂದಿ ಪ್ರಯಾಣಿಸುತ್ತಾರೆ. ಆದರೆ ಇಂದು ಇದೇ ರೈಲಿನಲ್ಲಿ ದುರಂತವೊಂದು ಸಂಭವಿಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಜಲ್ಪೈಗುರಿ-ರಾಮನಗರ ಮಾರ್ಗದಲ್ಲಿ ಬರುವ ರೈಲಿನಲ್ಲಿ ಈ ದುರಂತ ಸಂಭವಿಸಿದ್ದು,ಜೊತೆಯಲ್ಲಿದ್ದ ಮಗು ದಿಡೀರನೆ ರೈಲಿನಿಂದ ಕೆಳಗೆ ಬೀಳುತ್ತದೆ.ಕೂಡಲೆ ತಾಯಿ ಆಘಾತಗೊಂಡು ಕಿರುಚಿಕೊಂಡಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ರೈಲಿನ ತುರ್ತು ಚೈನ್ ಎಳೆದಿದ್ದಾರೆ. ಆದರೆ ರೈಲು ನಿಲ್ಲದೆ ಅದೇ ವೇಗದಲ್ಲಿ ಸಾಗಿದೆ.

ತಾಯಿ ಅಳುತ್ತಿದಿದ್ದನ್ನ ನೋಡಿ ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ಸತತವಾಗಿ ಚೈನ್ ಎಳೆದರೂ ರೈಲು ನಿಲುಗಡೆಯಾಗಲಿಲ್ಲ. ತುರ್ತು ಸಂದರ್ಭದಲ್ಲಿ ರೈಲನ್ನು ನಿಲ್ಲಿಸಲು ಬಳಸುವ ಚೈನ್ ಎಳೆದರೂ ರೈಲು ಸುಮಾರು 10 ರಿಂದ 15 ಕಿಲೋಮೀಟರ್ ವರೆಗೆ ಚಲಿಸುತ್ತಲೇ ಇತ್ತು ಎಂದು ಆರೋಪಿಸಲಾಗಿದೆ.

ಈ ವೇಳೆ ಬೇರೆ ದಾರಿಯಿಲ್ಲದೇ ಸ್ಥಳದಲ್ಲಿದ್ದ ಯುವಕನೊಬ್ಬ ಪೊಲೀಸ್ ಮತ್ತು ಆರ್‌ಪಿಎಫ್ (RPF) ಗೆ ಕರೆ ಮಾಡಿದ್ದಾನೆ ಆದರೂ ಯಾವುದೇ ಉಪಯೋಗವಾಗಿಲ್ಲ. ರೈಲ್ವೆ ಅಧಿಕಾರಿಗಳು ಅಥವಾ ಟಿಟಿಇ (TTE) ಕಡೆಯಿಂದಲೂ ಯಾವುದೇ ಸಹಾಯ ಸಿಗದೇ ಪೋಷಕರು ಕಂಗಾಲಾಗಿದ್ದರು.

RELATED ARTICLES
- Advertisment -
Google search engine

Most Popular