Tuesday, April 28, 2026
Google search engine

Homeಕ್ರೀಡೆಮಕ್ಕಳೊಂದಿಗೆ ಫುಟ್‌ ಬಾಲ್ ಆಡಿ ಸಂಭ್ರಮಿಸಿದ ಪ್ರಧಾನಿ ಮೋದಿ

ಮಕ್ಕಳೊಂದಿಗೆ ಫುಟ್‌ ಬಾಲ್ ಆಡಿ ಸಂಭ್ರಮಿಸಿದ ಪ್ರಧಾನಿ ಮೋದಿ

ಗ್ಯಾಂಗ್ಟಕ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಿಕ್ಕಿಂನ ಗ್ಯಾಂಗ್ಟಕ್‌ ನಲ್ಲಿ  ಮಕ್ಕಳೊಂದಿಗೆ ಫುಟ್‌ ಬಾಲ್ ಆಡಿ ಸಂಭ್ರಮಿಸಿದ್ದಾರೆ.

ಗ್ಯಾಂಗ್ಟಕ್‌ ನಲ್ಲಿ ಮುಂಜಾನೆ ವೇಳೆ ಪ್ರಧಾನಿ ಮೋದಿ ಅವರು ಫುಟ್‌ ಬಾಲ್ ಕಿಟ್ ಧರಿಸಿ ಯುವ ಆಟಗಾರರೊಂದಿಗೆ ಮೈದಾನಕ್ಕಿಳಿದು ಫುಟ್ಬಾಲ್ ಆಟವಾಡಿ ಮಕ್ಕಳ ಜೊತೆ ಸಂಭ್ರಮಿಸಿದರು.

ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ‘ಸಿಕ್ಕಿಂನ ನನ್ನ ಯುವ ಸ್ನೇಹಿತರೊಂದಿಗೆ ಫುಟ್‌ಬಾಲ್ ಆಡಿದ್ದು ನಿಜಕ್ಕೂ ಉತ್ತೇಜನಕಾರಿಯಾಗಿತ್ತು. ಗ್ಯಾಂಗ್ ಟೋಕ್‌ ನ ಸುಂದರ ಮುಂಜಾನೆಯಲ್ಲಿ ಸಿಕ್ಕಿಂನ ನನ್ನ ಯುವ ಸ್ನೇಹಿತರೊಂದಿಗೆ ಫುಟ್‌ಬಾಲ್ ಆಡುವುದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular