Saturday, May 2, 2026
Google search engine

Homeಸ್ಥಳೀಯಪೌರ ಕಾರ್ಮಿಕ ಸೇವೆ ಅಮೂಲ್ಯ : ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು

ಪೌರ ಕಾರ್ಮಿಕ ಸೇವೆ ಅಮೂಲ್ಯ : ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು

ಕೆ.ಆರ್.ನಗರ : ಪೌರ ಕಾರ್ಮಿಕರು ಕರ್ತವ್ಯ ನಿಷ್ಠೆಯ ಜತೆಗೆ ಆರೋಗ್ಯದ ಕಡೆಯೂ ಗಮನಹರಿಸಬೇಕು ಎಂದು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಹೇಳಿದರು. ಪಟ್ಟಣದ ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ತಾಲೂಕು ಪೌರ ಕಾರ್ಮಿಕ ಸಂಘದ ನೂತ‌ನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ದೊರಕಿಸಿಕೊಡಲು ಬದ್ದವಾಗಿದೆ ಎಂದರು.

ಸಂಘಟನೆ‌ ಮಾಡಿಕೊಳ್ಳುವುದು ಸಂಕಷ್ಟದಲ್ಲಿರುವ ಸಂಘದ ಸದಸ್ಯರ ಹಿತ ಕಾಪಾಡುವ‌ ಸದುದ್ದೇಶದಿಂದಲ್ಲದೆ ಇದನ್ನು ಅರಿತು‌ ಪ್ರತಿಯೊಬ್ಬರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ತಮ್ಮ ವೈಯುಕ್ತಿಕ ಜೀವನವನ್ನು ಬದಿಗಿಟ್ಟು ಪಟ್ಟಣದ ಸ್ವಚ್ಚತೆಯನ್ನು ಮಾಡುವ‌ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅಧ್ಯಕ್ಷರು‌ ನುಡಿದರು.

ಪುರಸಭೆ ಮುಖ್ಯಾಧಿಕಾರಿಗಳು ಪೌರ ಕಾರ್ಮಿಕರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಕೆಲಸ‌ ಮಾಡಬೇಕು ಎಂದು ಸಲಹೆ ನೀಡಿದ ರಾಜ್ಯಾಧ್ಯಕ್ಷರು ಕಾಯಕ ಜೀವಿಗಳನ್ನು ಸರ್ವರೂ ಬೆಂಬಲಿಸಬೇಕೆಂದರು. ಪುರಸಭೆ‌ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಮಾತನಾಡಿ ಖಾಯಂ ಆಗಿರುವ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ವಾಗದೆ ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ರಾಜ್ಯ ಸಂಘ ಸರ್ಕಾರದ ಮೇಲೆ ಒತ್ತಡ ಹಾಕಿ ನೌಕರರಿಗೆ ವೇತನ ಬಿಡುಗಡೆಗೆ ಸಹಕಾರಿಯಾಗಬೇಕೆಂದರು.

ರಾಜ್ಯ ಉಪಾಧ್ಯಕ್ಷ ವಿಜಯಕುಮಾರ್ ಆರ್, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ಕಾರ್ಯಾಧ್ಯಕ್ಷ ಮಂಚಯ್ಯ, ಗೌರವಾಧ್ಯಕ್ಷ ಬ್ಯಾಂಕ್ ರಂಗಣ್ಣ, ಕೊಡಗು ಜಿಲ್ಲಾಧ್ಯಕ್ಷ ಪರಮೇಶ್, ಮೈಸೂರು ತಾಲೂಕು ಅಧ್ಯಕ್ಷ ಬೀರಗುಂಡಿಮಂಜುನಾಥ್, ಸದಸ್ಯೆ ಮಹದೇವಿ, ಮುಖಂಡ ಭರತ್ ಕುಮಾರ್ ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.

ಅಧ್ಯಕ್ಷ ನಂಜುಂಡ, ಉಪಾಧ್ಯಕ್ಷ ಎನ್.ಮಹದೇವ, ಕಾರ್ಯದರ್ಶಿ ಹೇಮಂತ್ ಕುಮಾರ್, ಗೌರವಾಧ್ಯಕ್ಷ ವೆಂಕಟೇಶ್, ಕಾರ್ಯಾಧ್ಯಕ್ಷ ಪಿ.ಮಹದೇವ, ಖಜಾಂಚಿ‌ ಲೋಕೇಶ್, ಸಹಕಾರ್ಯದರ್ಶಿ ರಘು, ನಿರ್ದೇಶಕರು, ರಂಗ, ಮಂಜ, ಸುಬ್ರಮಣ್ಯ, ಶಶಿಕುಮಾರ್ ಅವರುಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

RELATED ARTICLES
- Advertisment -
Google search engine

Most Popular