Monday, May 4, 2026
Google search engine

Homeರಾಜಕೀಯದಾವಣಗೆರೆ ಬೈ ಎಲೆಕ್ಷನ್ನಲ್ಲಿ​ ಗೆದ್ದು ಬೀಗಿದ ಸಮರ್ಥ್ ಶಾಮನೂರು

ದಾವಣಗೆರೆ ಬೈ ಎಲೆಕ್ಷನ್ನಲ್ಲಿ​ ಗೆದ್ದು ಬೀಗಿದ ಸಮರ್ಥ್ ಶಾಮನೂರು

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ, ಕಾಂಗ್ರೆಸ್​​ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದು ಬೀಗಿದ್ದಾರೆ.

ಈ ಕ್ಷೇತ್ರದಲ್ಲಿ ಸಮರ್ಥ್‌ ಶಾಮನೂರು ವಿರುದ್ದ ನಿಂತಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪಗೆ ಸೋಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ನಡೆದ ಎರಡೂ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಸೋಲನ್ನ ಅನುಭವಿಸಿದೆ.

ಸಮರ್ಥ್ ಶಾಮನೂರು ಗೆಲುವಿನ ಹಿನ್ನೆಲೆ ಕಾಂಗ್ರೆಸ್​​ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಕೆಲವರು ಮುಸ್ಲಿಂ ಮತಗಳು ವಿಭಜನೆ ಆಗುವಂತೆ ಮಾಡಿದ್ದು, ಕಾಂಗ್ರೆಸ್​​ನ 22 ಸಾವಿರ ಮತಗಳು ಬೇರೆಯವರ ಪಾಲಾಗಿವೆ. ಹೀಗಾಗಿಯೇ ಇದಕ್ಕೆ ಕಾರಣರಾದ ಮುಖಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮುಸ್ಲಿಂ‌‌ ಮುಖಂಡ ಅಮಾನತ್ತನ್ನು ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular