Wednesday, May 6, 2026
Google search engine

Homeರಾಜಕೀಯಸರ್ಕಾರ ರಚನೆಗೆ ಟಿವಿಕೆಗೆ ಬೆಂಬಲ ಘೋಷಿಸಿದ ಕಾಂಗ್ರೆಸ್‌ : ಮುಖ್ಯಮಂತ್ರಿ ಸ್ಥಾನಕ್ಕೆ ಸನ್ನಾಹ

ಸರ್ಕಾರ ರಚನೆಗೆ ಟಿವಿಕೆಗೆ ಬೆಂಬಲ ಘೋಷಿಸಿದ ಕಾಂಗ್ರೆಸ್‌ : ಮುಖ್ಯಮಂತ್ರಿ ಸ್ಥಾನಕ್ಕೆ ಸನ್ನಾಹ

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆದಿದ್ದು, ದಳಪತಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಗೆಲುವನ್ನು ಸಾಧಿಸಿದೆ. ತಮಿಳಗ ವೆಟ್ರಿ ಕಳಗಂ ಪಕ್ಷ ಬಹುಮತದ ಕೊರತೆಯಿದ್ದರೂ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ.

ಇದೀಗ ವಿಜಯ್ ಅವರಿಗೆ ಕಾಂಗ್ರೆಸ್ ಪಕ್ಷ ಅನಿರೀಕ್ಷಿತವಾಗಿ ಬೆಂಬಲ ಘೋಷಿಸಿದ್ದು, ಟಿವಿಕೆಗೆ ಷರತ್ತುಬದ್ಧ ಬೆಂಬಲ ನೀಡುವ ನಿರ್ಣಯವನ್ನು ಕಾಂಗ್ರೆಸ್ ಪಕ್ಷದ ತಮಿಳುನಾಡು ಘಟಕ ಅಂಗೀಕರಿಸಿದೆ ಎಂದು ತಿಳಿದು ಬಂದಿದೆ.

ಇನ್ನು 2026 ರ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಎರಡು ಕ್ಯಾಬಿನೆಟ್ ಸ್ಥಾನಗಳು ಮತ್ತು ಸರ್ಕಾರಿ ಮಂಡಳಿಗಳ ಕೆಲವು ಅಧ್ಯಕ್ಷ ಸ್ಥಾನಗಳನ್ನು ಕೇಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕಾಂಗ್ರೆಸ್‌ನಿಂದ ಔಪಚಾರಿಕ ಬೆಂಬಲ ಪತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಇದರ ನಂತರ, ಕಾಂಗ್ರೆಸ್ ಶಾಸಕರು ಟಿವಿಕೆಯ ರಾಜಕೀಯ ಕಾರ್ಯಾಚರಣೆಗಳು ಪ್ರಸ್ತುತ ಕೇಂದ್ರೀಕೃತವಾಗಿರುವ ಪನೈಯೂರ್‌ನಲ್ಲಿ ವಿಜಯ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಈ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ ಮತ್ತು ಜಯರಾಮ್ ರಮೇಶ್ ಅವರಂತಹ ಹಿರಿಯ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಇನ್ನೂ ಕಾಂಗ್ರೆಸ್ ಬೆಂಬಲದ ಕುರಿತು ಟಿವಿಕೆ ನಾಯಕತ್ವಕ್ಕೆ ಈಗಾಗಲೇ ತಿಳಿಸಲಾಗಿದ್ದು, ಎರಡೂ ಪಕ್ಷಗಳ ನಡುವಿನ ಮೈತ್ರಿಯನ್ನು ಪರಿಣಾಮಕಾರಿಯಾಗಿ ದೃಢಪಡಿಸಲಾಗಿದೆ ಎಂದು ಮೂಲಗಳು ದೃಢಪಡಿಸಿದ್ದು, ಸಚಿವ ಸಂಪುಟ ರಚನೆಯನ್ನು ಅಂತಿಮಗೊಳಿಸಲು ವಿಜಯ್ ಅವರು ಚೆನ್ನೈನ ತಮ್ಮ ಪಟ್ಟಿನಂಪಕ್ಕಂ ನಿವಾಸದಲ್ಲಿ ತಮ್ಮ ಶಾಸಕರನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. \

ಮೇ 7 ರಂದು ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಅವರೊಂದಿಗೆ ಒಂಬತ್ತು ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನ ಒಟ್ಟು 234 ಸ್ಥಾನಗಳಲ್ಲಿ ವಿಜಯ್ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಈಗ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ, ಮ್ಯಾಜಿಕ್‌ ನಂಬರ್‌ 118 ತಲುಪಲಿದೆ. ವಿಜಯ್ ಮುಖ್ಯಮಂತ್ರಿಯಾಗುತ್ತಿದ್ದಂತೆ, ತಮಿಳುನಾಡಿನಾದ್ಯಂತ ಟಿವಿಕೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆ ಜೋರಾಗಿದೆ.

RELATED ARTICLES
- Advertisment -
Google search engine

Most Popular