Friday, May 8, 2026
Google search engine

Homeದೇಶಭಾರತ ಮತ್ತು ಸೂರಿನಾಮ್ ಸಂಬಂಧಕ್ಕೆ ಹೊಸ ಆಯಾಮ: ಎಸ್. ಜೈಶಂಕರ್

ಭಾರತ ಮತ್ತು ಸೂರಿನಾಮ್ ಸಂಬಂಧಕ್ಕೆ ಹೊಸ ಆಯಾಮ: ಎಸ್. ಜೈಶಂಕರ್

ನವದೆಹಲಿ : ಪಾರಾಮಾರಿಬೋದಲಿ ನಡೆದ ಭಾರತ-ಸೂರಿನಾಮ್ ಜಂಟಿ ಆಯೋಗದ 9ನೇ ಸಭೆಯ ನಂತರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಇದು ಸೂರಿನಾಮ್‌ಗೆ ಜೈಶಂಕರ್ ಅವರ ಮೊದಲ ಭೇಟಿಯಾಗಿದೆ. ಈ ವರ್ಷ ಭಾರತ ಮತ್ತು ಸೂರಿನಾಮ್ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 50 ವರ್ಷಗಳು ತುಂಬುತ್ತಿರುವುದು ವಿಶೇಷ. ಕಳೆದ 10 ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಗಣನೀಯವಾಗಿ ಬಲಗೊಂಡಿವೆ ಎಂದು ಅವರು ತಿಳಿಸಿದರು.

ಜೈಶಂಕರ್ ಅವರು ಸೂರಿನಾಮ್‌ನ ಸಚಿವ ಮೆಲ್ವಿನ್ ಬೌವಾ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಸಾಧ್ಯತೆ, ಸೂರಿನಾಮ್‌ನ ಸೇನೆ ಮತ್ತು ಪೊಲೀಸ್ ಪಡೆಯ ಸಾಮರ್ಥ್ಯ ವೃದ್ಧಿಗೆ ಭಾರತದ ಬೆಂಬಲ, ಈ ಹಿಂದೆ ಭಾರತವು ಇಲ್ಲಿ ಟ್ರಾನ್ಸ್ಮಿಷನ್ ಲೈನ್‌ಗಳು, ವಾಟರ್ ಪಂಪಿಂಗ್ ಸ್ಟೇಷನ್ ಮತ್ತು ಸ್ಟೀಲ್ ರೋಲಿಂಗ್ ಮಿಲ್ ಸ್ಥಾಪನೆಗೆ ಸಹಾಯ ಮಾಡಿದೆ. ಮುಂದಿನ ದಿನಗಳಲ್ಲಿ ಸೂರಿನಾಮ್ ಸರ್ಕಾರಕ್ಕೆ ಅಗತ್ಯವಿರುವ ಯೋಜನೆಗಳಿಗೆ ಹೊಸ ‘ಕ್ರೆಡಿಟ್ ಲೈನ್’ ನೀಡಲು ಭಾರತ ಸಿದ್ಧವಿದೆ. ಭಾರತವು ಡಿಜಿಟಲ್ ತಂತ್ರಜ್ಞಾನದಲ್ಲಿ ಸಾಧಿಸಿರುವ ಪ್ರಗತಿಯನ್ನು ಸೂರಿನಾಮ್ ಜೊತೆಗೆ ಹಂಚಿಕೊಳ್ಳಲು ಉತ್ಸುಕವಾಗಿದೆ.

ಕೃತಕ ಬುದ್ಧಿಮತ್ತೆ ಯುಗದಲ್ಲಿ ಎರಡೂ ದೇಶಗಳು ಹೇಗೆ ಸಹಕರಿಸಬಹುದು ಮತ್ತು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಎಐ ಅನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಯಿತು. ನಮ್ಮ ಸಂಬಂಧದ ಅಡಿಪಾಯವೇ ಜನರ ನಡುವಿನ ಬಾಂಧವ್ಯ. ‘ಹೆರಿಟೇಜ್ ಮಂತ್’ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾರತ ಆಸಕ್ತಿ ಹೊಂದಿದೆ.
ಭಾರತ-ಕ್ಯಾರಿಕಾಮ್ (India-CARICOM) ಅನುದಾನದಡಿ ನಿರ್ಮಿಸಲಾದ ಫ್ರೂಟ್ ಪ್ರೊಸೆಸಿಂಗ್ ಯುನಿಟ್ ಈಗ ಸಿದ್ಧವಾಗಿದ್ದು, ಇದನ್ನು ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು. ಭಾರತ ಮತ್ತು ಸೂರ‍ಿನಾಮ್ ಎರಡೂ ದೇಶಗಳು ಹಂಚಿಕೆಯ ಇತಿಹಾಸವನ್ನು ಹೊಂದಿವೆ ಮತ್ತು ಗ್ಲೋಬಲ್ ಸೌತ್ (Global South) ಅಭಿವೃದ್ಧಿಗೆ ಬದ್ಧವಾಗಿವೆ.

ಭಾರತವು ಸೂರಿನಾಮ್ ಅನ್ನು ತನ್ನ ನಂಬಿಕಸ್ಥ ಪಾಲುದಾರ ಎಂದು ಪರಿಗಣಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ವ್ಯಾಪಾರ, ತಂತ್ರಜ್ಞಾನ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಈ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular