ಬೆಂಗಳೂರು : ಇಂಧನ, ಅಡುಗೆ ಎಣ್ಣೆಯನ್ನ ಮಿತವಾಗಿ ಬಳಸಿ, , ಚಿನ್ನ ಖರೀದಿಸುವುದನ್ನ ತಾತ್ಕಾಲಿಕವಾಗಿ ಮುಂದೂಡಿ ಎಂದು ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮೋದಿ ಅವರು ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಿ ಅಂತಾ ಹೇಳುತ್ತಿದ್ದಾರೆ. ಅದರೆ ಬೆಲೆ ಯಾಕೆ ಹೆಚ್ಚಾಯ್ತು ಅಂತಾ ಹೇಳುತ್ತಿಲ್ಲ ಯಾರಿಂದ ತೊಂದರೆ ಅಂತ ಮೋದಿ ವಿವರಣೆ ಕೊಡಬೇಕು ಎಂದು ಆಗ್ರಹಿಸಿದರು.
ಮೋದಿ ಅವರು ಚಿನ್ನ ಖರೀದಿಸಬೇಡಿ ಅನ್ನುತ್ತಿದ್ದಾರೆ. ಆದರೆ ಚಿನ್ನದ ಬೆಲೆ ಯಾಕೆ ಹೆಚ್ಚಾಯಿತು ಎಂದ ಹೇಳಲಿಲ್ಲ. ಮದುವೆ ಮುಂಜಿ ಮಾಡುವವರು ಚಿನ್ನ ಕೊಳ್ಳಬೇಡಿ ಅಂದ್ರೆ ಆಗುತ್ತಾ? ಎಂದು ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟರು.
ಕೋವಿಡ್ ಸಂದರ್ಭಧಲ್ಲಿ ದೀಪಹಚ್ಚಿ ಅಂದ್ರಿ ದೀಪ ಹಚ್ಚಿದವು. ಚಪ್ಪಾಳೆ ತಟ್ಟಿ ಅಂದಿದ್ರು ಚಪ್ಪಾಳೆಯನ್ನೂ ತಟ್ಟಿದವು. ಏನಾದರೂ ನಿಂತುಹೋಯ್ತಾ? ಜನರಿಗೆ ಸಲಹೆ ನೀವು ಕೊಡ್ತೀರಾ ಅದರೆ ಪ್ರಾಕ್ಟಿಕಲ್ ಆಗಿರಬೇಕು ಎಂದರು.



