Thursday, May 14, 2026
Google search engine

Homeರಾಜಕೀಯಕೇಸರಿ ಶಾಲ್ ಗೆ ಅವಕಾಶ ಇಲ್ಲ: ಸಿಎಂ ಸ್ಪಷ್ಟನೆ

ಕೇಸರಿ ಶಾಲ್ ಗೆ ಅವಕಾಶ ಇಲ್ಲ: ಸಿಎಂ ಸ್ಪಷ್ಟನೆ

ಮೈಸೂರು: ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲ್ ಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.

ನಗರದ ಟಿ.ಕೆ.ಲೇಔಟ್ ನಲಗಲಿರುವ ತಮ್ಮ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು. ಹೊಸದಾಗಿ ಮಾಡುವಂತಿಲ್ಲ. ಕೇಸರಿ ಶಾಲ್ ಧರಿಸುವಂತಿಲ್ಲ. ಆದರೆ ಜನಿವಾರ, ಉಡುದಾರ, ಹಿಜಾಬ್, ರುದ್ರಾಕ್ಷಿ ಹಾಕಿಕೊಂಡು ಬರಬಹುದು. ಅವರವರ ನಂಬಿಕೆಗಳಿಗೆ ಅನುವಾಗುವ ಆಚರಣೆಯಲ್ಲಿರುವ ಧಾರ್ಮಿಕ ಸಂಕೇತಗಳನ್ನಷ್ಟೇ ಹಾಕಿಕೊಳ್ಳಬಹುದು ಹೊಸದಾಗಿ ಹಾಕಿಕೊಳ್ಳುವ ಹಾಗಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಡೀಸೆಲ್ ಬಳಕೆ ಕಡಿತಗೊಳಿಸಲು ತಮ್ಮ ಬೆಂಗಾವಲನ್ನು ಕಡಿತಗೊಳಿಸಿದ್ದು, ಈ ಬಗ್ಗೆ ಕರ್ನಾಟಕದಲ್ಲಿಯೂ ಮಾಡಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿ, ಅದು ಕೇವಲ ತಾತ್ಕಾಲಿಕ ಕ್ರಮವಷ್ಟೇ. ಪ್ರಧಾನಿಗಳು ಹೇಳಿರುವುದು ಸರಿಯಾದ ಕ್ರಮವಲ್ಲ. ಅದಕ್ಕೆ ಬದಲು ಬೇರೆ ದೇಶಗಳೊಂದಿಗೆ ಮಾತನಾಡಿ ಒಮ್ಮತಕ್ಕೆ ಬರುವುದು ಸೂಕ್ತ ಎಂದರು.

ನೀಟ್ ಪ್ರಶ್ನೆ ಪತ್ರಿಕೆ ಉತ್ತರ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ.ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನೀಟ್ ಬಗ್ಗೆ ಮೊದಲು ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು.

ಸಂಪುಟ ರಚನೆ ಮಾಡಬೇಕು
ಹೈಕಮಾಂಡ್ ಸಂಪುಟ ಪುನರ್ ರಚನೆ ಸಂಬಂಧ ದೆಹಲಿಗೆ ಬರಬೇಕು ಎಂದಾಗಷ್ಟೇ ದೆಹಲಿ ಹೋಗುತ್ತೇನೆ ಹೊರತು ನಾನೇ ದೆಹಲಿಗೆ ಹೋಗುವುದಿಲ್ಲ. ಸಂಪುಟ ಪುನರ್ ರಚನೆ ಮಾಡಬೇಕಿದೆ.

-ಸಿಎಂ ಸಿದ್ದರಾಮಯ್ಯ

RELATED ARTICLES
- Advertisment -
Google search engine

Most Popular