ಹೊಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವ್ಯವಸ್ಥಾಪನ ಮಂಡಳಿಗೆ ಸದಸ್ಯರನ್ನಾಗಿ ಕೆ.ಆರ್ ನಗರ ತಾಲ್ಲೂಕು ವಿಧಾನಸಭಾ ಸದಸ್ಯರಾದ ಡಿ.ರವಿಶಂಕರ್ ಅವರನ್ನು ನಾಮನಿರ್ದೇಶನ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಡಿ ರವಿಶಂಕರ್ ರವರು ವಿಧಾನಸಭಾ ಸದಸ್ಯತ್ವ ಹೊಂದಿರುವ ವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವ್ಯವಸ್ಥಾಪನ ಮಂಡಳಿಯ ಸದಸ್ಯತ್ವವನ್ನು ಹೊಂದಿರುತ್ತಾರೆ ಎಂದು ಈ ಸಂಬಂಧ ಕರ್ನಾಟಕ ವಿಧಾನ ಸಭೆ ಸಚಿವಾಲಯದ ನಿರ್ದೇಶಕ ಬಿ.ಎಸ್.ಮಹಾಲಿಂಗೇಶ್ ಆದೇಶ ಹೊರಡಿಸಿದ್ದಾರೆ.