Tuesday, May 19, 2026
Google search engine

Homeರಾಜ್ಯಸುದ್ದಿಜಾಲ‘ಪುಸ್ತಕ ಮನೆ’ಯ ರೂವಾರಿ ಅಂಕೇಗೌಡರಿಗೆ ಗೌರವ ಪತ್ರ ಹಸ್ತಾಂತರ

‘ಪುಸ್ತಕ ಮನೆ’ಯ ರೂವಾರಿ ಅಂಕೇಗೌಡರಿಗೆ ಗೌರವ ಪತ್ರ ಹಸ್ತಾಂತರ

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದ ‘ಪುಸ್ತಕ ಮನೆ’ಯ ರೂವಾರಿ ಅಂಕೇಗೌಡ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಗಾಗಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಈ ಸಂಬಂಧ ನವ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೇ 25 ರಂದು ನಡೆಯುವ  ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಪದ್ಮಶ್ರೀ ಪ್ರಶಸ್ತಿ ಪಡೆದ ಅಂಕೇಗೌಡ ಅವರಿಗೆ ಜಿಲ್ಲಾಧಿಕಾರಿಗಳಾದ ಡಾ ಕುಮಾರ ಅವರು ಗೌರವ ಪತ್ರವನ್ನು ಹಸ್ತಾಂತರಿಸಿದರು.

ಜಿಲ್ಲಾಧಿಕಾರಿ ಡಾ ಕುಮಾರ ಅವರು ನವದೆಹಲಿಗೆ ಪ್ರಯಾಣದ ಸಂದರ್ಭದಲ್ಲಿ ಅವರಿಗೆ ತೊಂದರೆ ಆಗದಂತೆ ಸಹಾಯಕರನ್ನು ಅವರ ಜೊತೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular