Tuesday, May 19, 2026
Google search engine

Homeಸ್ಥಳೀಯಪದವಿ ಅಂಕಪಟ್ಟಿ ದರ ಹೆಚ್ಚಳ: ವಿದ್ಯಾರ್ಥಿಗಳ ಮುಷ್ಕರ

ಪದವಿ ಅಂಕಪಟ್ಟಿ ದರ ಹೆಚ್ಚಳ: ವಿದ್ಯಾರ್ಥಿಗಳ ಮುಷ್ಕರ

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ಪದವಿ ಪ್ರಮಾಣ ಪತ್ರದ ಅಂಕಪಟ್ಟಿ ದರವನ್ನು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹಾಗೂ ಅಂಕ ಪಟ್ಟಿ ದರ ಕಟ್ಟಲು ಅಂತಿಮ ದಿನವನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿದರು.
ನಗರದ ಕ್ರಾಫರ್ಡ್‌ ಭವನದ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು 2023, 24 ಮತ್ತು 25ನೇ ಸಾಲಿನ ವಿದ್ಯಾರ್ಥಿಗಳಿಂದ ಶುಲ್ಕ ಪಾವತಿಗೆ ನಾಳೆಯೇ ಕೊನೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಸಾವಿರಾರು ವಿದ್ಯಾರ್ಥಿಗಳು ವಿವಿ ಆವರಣದಲ್ಲಿರುವ ಎಸ್‌ಬಿಐ ಶಾಖೆಯೊಂದರಲ್ಲೇ ಕಟ್ಟಬೇಕೆಂಬ ನಿಯಮವಿದ್ದ ಹಿನ್ನೆಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದರು. ಅಲ್ಲದೆ, ಈ ಹಿಂದೆ ಪದವಿ ಪ್ರಮಾಣ ಅಂಕಪಟ್ಟಿಗೆ ಸಾಮಾನ್ಯ ವರ್ಗದವರಿಗೆ ೧೫೦೦, ಹಿಂದುಳಿದ ವರ್ಗದವರಿಗೆ ೭೦೦ ರೂ ಇದ್ದ ಶುಲ್ಕವನ್ನು ಈಗ ಏಕಾಎಕಿ ಸಾಮಾನ್ಯ ವರ್ಗದವರಿಗೆ ೨೮೪೦ ಹಾಗೂ ಹಿಂದುಳಿದ ವರ್ಗದವರಿಗೆ ೧೩೦೦ಕ್ಕೆ ಏರಿಕೆ ಮಾಡಿರುವುದನ್ನು ಖಂಡಿಸಿದರು.
ಹಿಂದೆ ಅಂಚೆ ಮೂಲಕ ಅಂಕಪಟ್ಟಿ ಕಳುಹಿಸಲಾಗುತ್ತಿತ್ತು. ಆದರೆ ಈಗ ಡಿಜಿಟಲ್‌ ಲಾಕರ್‌ ಮೂಲಕ ವಿದ್ಯಾರ್ಥಿಗಳೇ ನೇರವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗಿರುವಾಗ ಅಂಕಪಟ್ಟಿಗೆ ದರ ವಿಧಿಸಿದಂತೆ ನಿಯಮ ಸಹ ರೂಪಿಸಿದೆ. ಹೀಗಿದ್ದರೂ ನಿಯಮಬಾಹಿರವಾಗಿ ಮೈಸೂರು ವಿಶ್ವ ವಿದ್ಯಾನಿಲಯ ಹೆಚ್ಚಳವಾಗಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದರು. ವಿದ್ಯಾರ್ಥಿಗಳ ದಿಢೀರ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಶುಲ್ಕ ಕಟ್ಟಲು ಕೊನೆಯ ದಿನಾಂಕವನ್ನು ಮೇ.27ಕ್ಕೆ ಮುಂದೂಡಿದರು. ಇನ್ನೂ ಶುಲ್ಕ ವಿನಾಯಿತಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

RELATED ARTICLES
- Advertisment -
Google search engine

Most Popular