Sunday, May 24, 2026
Google search engine

Homeಅಪರಾಧಟಿ ನರಸೀಪುರ ತಾಲೂಕಿನಲ್ಲಿ ಅಕ್ರಮ ಯೂರಿಯಾ ಗೊಬ್ಬರ ವಶ

ಟಿ ನರಸೀಪುರ ತಾಲೂಕಿನಲ್ಲಿ ಅಕ್ರಮ ಯೂರಿಯಾ ಗೊಬ್ಬರ ವಶ

ಟಿ ನರಸೀಪುರ: ಟಿ ನರಸೀಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಇವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬನ್ನೂರ್ ಹೋಬಳಿ ಕೊಡಗಹಳ್ಳಿ ಗ್ರಾಮದ ಇದಾಯತ್ ಉಲ್ಲಾ ಬಿನ್ ಶೇಕ್ ಹೈದೆರ್ ಹುಸೇನ್ ರವರ ತೋಟದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 600 ಬ್ಯಾಗ್ ಕೃಷಿ ಬಳಕೆಗೆ ಮೀಸಲಿಟ್ಟಿದ್ದ ಯೂರಿಯಾ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಯಿತು.

ಸದರಿ ಗೊಬ್ಬರವನ್ನು ಕಳಸಂತೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡಿ ಕೈಗಾರಿಕೆ ಉಪಯೋಗಕ್ಕೆ ಬಳಕೆ ಮಾಡಲು ಉದ್ದೇಶಿಸಿರುವುದು ಮೇಲ್ನೋಟಕ್ಕೆ ಕಂಡುಬದಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೋರಲಾಗಿದೆ.

ದಾಳಿ ವೇಳೆ ಸಹಾಯಕ ಕೃಷಿ ನಿರ್ದೇಶಕರು, ಟಿ ನರಸೀಪುರ ಶ್ರೀಮತಿ ರೂಪ , ಕೃಷಿ ಅಧಿಕಾರಿ ಬನ್ನೂರು ಹೋಬಳಿ ಶ್ರೀಮತಿ ವಿಶಾಲೂ, ಉಪ ಕೃಷಿ ನಿರ್ದೇಶಕರು ಮೈಸೂರು ಶ್ರೀ ರಾಜು, ಜಾರಿದಳ ಜಂಟಿ ಕೃಷಿ ನಿರ್ದೇಶಕರು ಶ್ರೀ ರಾಮಕೃಷ್ಣ, ಉಪ ಕೃಷಿ ನಿರ್ದೇಶಕರು ಶ್ರೀಮತಿ ಮಮತಾ, ಸಹಾಯಕ ಕೃಷಿ ನಿರ್ದೇಶಕರು ಶ್ರೀ ಸತೀಶ್, ಸಹಾಯಕ ತಾoತ್ರಿಕ ವ್ಯವಸ್ಥಾಪಕರು ಶ್ರೀ ಶಿವರಾಮು ಹಾಜರಿದ್ದರು.

RELATED ARTICLES
- Advertisment -
Google search engine

Most Popular