Wednesday, June 3, 2026
Google search engine

Homeಕ್ರೀಡೆಎಂ.ಪಿ. ಅಜಿತ್‌ಗೆ ಇಂಟರ್‌ನ್ಯಾಷನಲ್ ಚೆಸ್ ಫೆಸ್ಟಿವಲ್‌ನಲ್ಲಿ ತೃತೀಯ ಸ್ಥಾನ

ಎಂ.ಪಿ. ಅಜಿತ್‌ಗೆ ಇಂಟರ್‌ನ್ಯಾಷನಲ್ ಚೆಸ್ ಫೆಸ್ಟಿವಲ್‌ನಲ್ಲಿ ತೃತೀಯ ಸ್ಥಾನ

ಮೈಸೂರು: ಇತ್ತೀಚೆಗೆ ಒಡಿಶಾದಲ್ಲಿ ನಡೆದ ಪ್ರತಿಷ್ಠಿತ ೧೭ನೇ ಕೆಐಐಟಿ ಇಂಟರ್‌ನ್ಯಾಷನಲ್ ಚೆಸ್ ಫೆಸ್ಟಿವಲ್ – ೨೦೨೬ ರಲ್ಲಿ ಮೈಸೂರಿನ ಎಂ.ಪಿ. ಅಜಿತ್‌ರವರು ೩ನೇ ಸ್ಥಾನ ಪಡೆದು ರಾಜ್ಯಕ್ಕೆ ಹಾಗೂ ಮೈಸೂರಿಗೆ ಕೀರ್ತಿ ತಂದಿದ್ದಾರೆ.

ವಿಶ್ವ ಅಮೆಚೂರ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ರಜತ ಪದಕ ಪಡೆದಿರುವ ಎಂ.ಪಿ. ಅಜಿತ್ ಅವರು ಒಡಿಶಾದ ಭುವನೇಶ್ವರದಲ್ಲಿ ನಡೆದ ಪ್ರತಿಷ್ಠಿತ ೧೭ನೇ ಕೆಐಐಟಿ ಇಂಟರ್‌ನ್ಯಾಷನಲ್ ಚೆಸ್ ಫೆಸ್ಟಿವಲ್ – ೨೦೨೬ ರಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಿ-ಕ್ಯಾಟಗರಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, ತೃತೀಯ ಸ್ಥಾನ ಹಾಗೂ ೨,೫೦,೦೦೦/- ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ.

೪೦ ವರ್ಷ ವಯಸ್ಸಿನ ಎಂ.ಪಿ. ಅಜಿತ್ ಅವರು ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

RELATED ARTICLES
- Advertisment -
Google search engine

Most Popular