Monday, June 8, 2026
Google search engine

Homeಸಿನಿಮಾಈ ಕ್ರೀಡೆಗೆ ಕೋಚ್ ಆಗಲು ಬಯಸಿದ್ದರು ಶಿಲ್ಪಾ ಶೆಟ್ಟಿ : ಆದರೆ ಬಾಲಿವುಡ್‌ ಗೆ ಸಿಕ್ಕಿತ್ತು...

ಈ ಕ್ರೀಡೆಗೆ ಕೋಚ್ ಆಗಲು ಬಯಸಿದ್ದರು ಶಿಲ್ಪಾ ಶೆಟ್ಟಿ : ಆದರೆ ಬಾಲಿವುಡ್‌ ಗೆ ಸಿಕ್ಕಿತ್ತು ಎಂಟ್ರಿ!

ಮುಂಬೈ : ಬಾಲಿವುಡ್‌ನಲ್ಲಿ 90ರ ದಶಕದ ಮಾತು ಬಂದಾಗಲೆಲ್ಲಾ ಕರಾವಳಿಯ ಬೆಡಗಿ, ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಹೆಸರು ನೆನಪಿಗೆ ಬರುವುದು ಸಹಜ. ತಮ್ಮ ನಟನೆಯ ಜೊತೆಗೆ ಸೌಂದರ್ಯ ಮತ್ತು ಫಿಟ್‌ನೆಸ್‌ನಿಂದ ಲಕ್ಷಾಂತರ ಜನರ ಹೃದಯ ಗೆದ್ದಿರುವ ಈ ನಟಿ ಹಲವು ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಅವರು ತಮ್ಮ 51ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಅವರ ಜೀವನದ ಕೆಲವು ಆಸಕ್ತಿದಾಯಕ ವಿಷಯಗಳನ್ನು ನಿಮಗೆ ತಿಳಿಸುತ್ತಿದ್ದೇವೆ.

ವಾಲಿಬಾಲ್ ಕೋಚ್ ಆಗಲು ಬಯಸಿದ್ದರು ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ 1975ರ ಜೂನ್ 8 ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಸುರೇಂದ್ರ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ. ಶಿಲ್ಪಾ ಶೆಟ್ಟಿಗೆ ಬಾಲ್ಯದಲ್ಲಿ ವಾಲಿಬಾಲ್ ಆಡುವ ಭಾರೀ ಹವ್ಯಾಸವಿತ್ತು ಮತ್ತು ಅವರು ಈ ಕ್ರೀಡೆಯ ಕೋಚ್ (ತರಬೇತುದಾರೆ) ಆಗಲು ಬಯಸಿದ್ದರು. ಆದರೆ ಹಣೆಬರಹವೇ ಬೇರೆ ಇತ್ತು. ನಟಿ ‘ಕರ್ಲಿ ಟೇಲ್ಸ್’ (Curly Tales) ನ ‘ಸಂಡೇ ಬ್ರಂಚ್’ (Sunday Brunch) ಸಂದರ್ಶನದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ‘ಆ ಸಮಯದಲ್ಲಿ ವಾಲಿಬಾಲ್ ಕೋಚ್ ಆಗುವುದೇ ನನ್ನ ಜೀವನದ ಗುರಿಯಾಗಿತ್ತು ಮತ್ತು ನನ್ನ ಲೈಫ್ ಸೆಟ್ ಆಗಿದೆ ಎಂದೇ ನಾನು ಭಾವಿಸಿದ್ದೆ’ ಎಂದು ಹೇಳಿದ್ದರು.

ವಾಲಿಬಾಲ್‌ನಲ್ಲಿ ಹೆಚ್ಚಿನ ಆಸಕ್ತಿ ಇದ್ದಿದ್ದರಿಂದ ಶಿಲ್ಪಾ ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿತ್ತು. ಎಸ್‌ಎಸ್‌ಸಿ (SSC) ಪರೀಕ್ಷೆಗೆ ಮುನ್ನ ತಮ್ಮ ಪ್ರಿಲಿಮ್ಸ್ ರಿಪೋರ್ಟ್ ಕಾರ್ಡ್ ತುಂಬಾ ಕಳಪೆಯಾಗಿತ್ತು ಮತ್ತು ತಮಗೆ ಕೇವಲ ಶೇಕಡಾ 48 ರಷ್ಟು ಅಂಕಗಳು ಬಂದಿದ್ದವು ಎಂದು ಅವರು ತಿಳಿಸಿದ್ದರು. ಇದನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದ ಶಿಲ್ಪಾ, ‘ನಾನು ವಾಲಿಬಾಲ್ ಆಟಗಾರ್ತಿಯಾಗಿದ್ದೆ. ನನಗೆ ಪಠ್ಯೇತರ ಚಟುವಟಿಕೆಗಳೆಂದರೆ ತುಂಬಾ ಇಷ್ಟವಿತ್ತು. ವಾಲಿಬಾಲ್ ಆಟಗಾರ್ತಿಯಾಗಿ ನಾನು ಬಾಂಬೆ ಝೋನ್‌ಗೆ ಆಯ್ಕೆಯೂ ಆಗಿದ್ದೆ. ಆದರೆ, ನನ್ನ ರಿಸಲ್ಟ್ ನೋಡಿದಾಗ ನನ್ನ ತಾಯಿ ನನ್ನ ಮೇಲೆ ತುಂಬಾ ಕೋಪಗೊಂಡು, ನನ್ನನ್ನು ದಂಡ ಎಂದು ಬೈದಿದ್ದರು’ ಎಂದಿದ್ದಾರೆ.

ನಂತರ ಬಾಲಿವುಡ್‌ ಗೆ ಪ್ರವೇಶ

ಶಿಲ್ಪಾ ಶೆಟ್ಟಿ ಒಂದು ಕಡೆ ವಾಲಿಬಾಲ್ ಕೋಚ್ ಆಗಲು ಬಯಸಿದ್ದರೂ, ಸಮಯ ಬದಲಾದಂತೆ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧರಿಸಿದರು. ಅವರು 15-16ನೇ ವಯಸ್ಸಿನಲ್ಲೇ ಮಾಡೆಲಿಂಗ್ ಮಾಡಲು ಪ್ರಾರಂಭಿಸಿದ್ದರು. ಇದೇ ಸಮಯದಲ್ಲಿ ಅವರಿಗೆ ‘ಬಾಜಿಗರ್’ ಚಿತ್ರದ ಆಫರ್ ಸಿಕ್ಕಿತು. ಅವರು ಈ ಚಿತ್ರದ ಶೂಟಿಂಗ್ ಮಾಡುವಾಗ 11ನೇ ತರಗತಿಯಲ್ಲಿ ಓದುತ್ತಿದ್ದರು. ‘ಬಾಜಿಗರ್’ ಸಿನಿಮಾ 1993 ರಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತು. ಇದರಲ್ಲಿ ಅವರ ಜೊತೆ ಶಾರುಖ್ ಖಾನ್ ಮತ್ತು ಕಾಜೋಲ್ ಅವರಂತಹ ಕಲಾವಿದರು ನಟಿಸಿದ್ದರು. ಶಿಲ್ಪಾ ಶೆಟ್ಟಿ ತಮ್ಮ 34 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮೈ ಕಿಲಾಡಿ ತೂ ಅನಾಡಿ, ಧಡಕನ್, ಅಪ್ನೆ, ರಿಶ್ತೆ, ಗರ್ವ್ ಮತ್ತು ಇಂಡಿಯನ್ ನಂತಹ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular