Tuesday, June 9, 2026
Google search engine

Homeದೇಶಬಡವರ ಕಲ್ಯಾಣ ಯೋಜನೆಗಳಿಂದ 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಮುಕ್ತ : ಕೇಂದ್ರ...

ಬಡವರ ಕಲ್ಯಾಣ ಯೋಜನೆಗಳಿಂದ 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಮುಕ್ತ : ಕೇಂದ್ರ ಸರ್ಕಾರ

ನವದೆಹಲಿ : ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಕ್ರಮಗಳ ವಿಸ್ತರಣೆಯಿಂದಾಗಿ ದೇಶದ ಬಡವರ ಜೀವನಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿದೆ. ಸರ್ಕಾರದ ಪ್ರಕಾರ, ಈ ಅವಧಿಯಲ್ಲಿ ಸುಮಾರು 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ.

ಜಲ ಮತ್ತು ನೈರ್ಮಲ್ಯ: ‘ಜಲ ಜೀವನ ಮಿಷನ್’ ಅಡಿಯಲ್ಲಿ ಆಗಸ್ಟ್ 2019 ರಲ್ಲಿದ್ದ 3.23 ಕೋಟಿ ನಳದ ನೀರು ಸಂಪರ್ಕವು ಮೇ 2026 ರ ವೇಳೆಗೆ 15.84 ಕೋಟಿ ಮನೆಗಳಿಗೆ ತಲುಪಿದೆ. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ 12.11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಗ್ರಾಮೀಣ ನೈರ್ಮಲ್ಯ ವ್ಯಾಪ್ತಿಯು 39% ರಿಂದ 100% ಕ್ಕೆ ಏರಿದೆ.

ಆರೋಗ್ಯ ಸುರಕ್ಷತೆ: ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಮೇ 2026 ರ ವೇಳೆಗೆ 43.93 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ. ಇದರಿಂದ ಕೋಟಿಗಟ್ಟಲೆ ಜನರಿಗೆ ನಗದು ರಹಿತ ಚಿಕಿತ್ಸೆ ಲಭ್ಯವಾಗಿದೆ.

ಆಹಾರ ಭದ್ರತೆ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 81 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ನೀಡಲಾಗುತ್ತಿದೆ. ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆ ವಲಸೆ ಕಾರ್ಮಿಕರಿಗೆ ಸಹಕಾರಿಯಾಗಿದೆ.

ಶಿಕ್ಷಣ: ಹೆಣ್ಣು ಮಕ್ಕಳ ಶಾಲಾ ಬಿಡುವ ದರ (Dropout rate) ಗಣನೀಯವಾಗಿ ಇಳಿಕೆಯಾಗಿದೆ. ಪ್ರಾಥಮಿಕ ಹಂತದಲ್ಲಿ ಇದು 2013-14ರಲ್ಲಿ 4.6% ಇದ್ದದ್ದು 2024-25ರ ವೇಳೆಗೆ 0.3% ಕ್ಕೆ ತಗ್ಗಿದೆ.

ವಸತಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಮೇ 2026 ರ ವೇಳೆಗೆ 3.03 ಕೋಟಿ ಮನೆಗಳನ್ನು ಪೂರ್ಣಗೊಳಿಸಲಾಗಿದೆ.

ಮಹಿಳಾ ಸಬಲೀಕರಣ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ವಸಹಾಯ ಸಂಘಗಳಿಗೆ ಸೇರಿದ ಮಹಿಳೆಯರ ಸಂಖ್ಯೆ 10 ಕೋಟಿಗೆ ತಲುಪಿದೆ. ‘ಲಖಪತಿ ದೀದಿ’ ಮತ್ತು ‘ನಮೋ ಡ್ರೋನ್ ದೀದಿ’ಯಂತಹ ಯೋಜನೆಗಳು ಮಹಿಳೆಯರನ್ನು ಉದ್ಯಮಶೀಲತೆಯತ್ತ ಕೊಂಡೊಯ್ಯುತ್ತಿವೆ.

ಸಾಮಜಿಕ ಭದ್ರತೆ: ಅಟಲ್ ಪೆನ್ಷನ್ ಯೋಜನೆ, ಜೀವ ಜ್ಯೋತಿ ವಿಮಾ ಯೋಜನೆ ಮತ್ತು ಇ-ಶ್ರಮ್ ಪೋರ್ಟಲ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ರಕ್ಷಣೆ ನೀಡಲಾಗಿದೆ.

ಡಿಜಿಟಲ್ ಆಡಳಿತ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ (Inclusive Development) ಮಂತ್ರದೊಂದಿಗೆ ಸರ್ಕಾರವು ‘ಅಂತ್ಯೋದಯದಿಂದ ಸರ್ವೋದಯ’ ಮತ್ತು ‘ವಿಕಸಿತ ಭಾರತ’ ಗುರಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಸರ್ಕಾರ ತಿಳಿಸಿದೆ.

RELATED ARTICLES
- Advertisment -
Google search engine

Most Popular