Wednesday, June 17, 2026
Google search engine

Homeರಾಜ್ಯನಿಯತಕಾಲಿಕೆಗಳು ಜೂ. 30 ರೊಳಗೆ ವಾರ್ಷಿಕ ವರದಿ ಸಲ್ಲಿಸದಿದ್ದರೆ 10,000 ರೂ. ದಂಡ

ನಿಯತಕಾಲಿಕೆಗಳು ಜೂ. 30 ರೊಳಗೆ ವಾರ್ಷಿಕ ವರದಿ ಸಲ್ಲಿಸದಿದ್ದರೆ 10,000 ರೂ. ದಂಡ

ನವದೆಹಲಿ / ಬೆಂಗಳೂರು : ವಾರ್ಷಿಕ ವರದಿಗಳನ್ನು ಸಲ್ಲಿಸದ ಕಾರಣಕ್ಕಾಗಿ ರದ್ದಾಗಿರುವ ಪತ್ರಿಕೆಗಳ ಶೀರ್ಷಿಕೆಗಳನ್ನು (Titles) ಮರುಸ್ಥಾಪಿಸಲು ಭಾರತ ಸರ್ಕಾರದ ಪತ್ರಿಕೆಗಳ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು ಪ್ರಕಾಶಕರಿಗೆ ಕೊನೆಯ ಅವಕಾಶವನ್ನು ನೀಡಿದೆ.

ದೇಶದ ಎಲ್ಲಾ ನೋಂದಾಯಿತ ನಿಯತಕಾಲಿಕೆಗಳ (Periodicals) ಪ್ರಕಾಶಕರು 2024-25ರ ಆರ್ಥಿಕ ವರ್ಷದ ಆಡಿಟ್ ಮಾಡಲಾದ ವಾರ್ಷಿಕ ಹೇಳಿಕೆಯನ್ನು (Annual Statement) 2026 ನೇ ಜೂನ್ 30 ರ ಒಳಗಾಗಿ ಸಲ್ಲಿಸುವಂತೆ, ತಪ್ಪಿದಲ್ಲಿ ಭಾರಿ ದಂಡ ವಿಧಿಸಲಾಗುವುದು ಎಂದು ಭಾರತ ಸರ್ಕಾರದ ಪತ್ರಿಕೆಗಳ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು  ತಿಳಿಸಿದೆ.

ಸರ್ಕಾರ ಹೊರಡಿಸಿರುವ ‘ಸಲಹಾ ಸೂಚನೆ ಸಂಖ್ಯೆ 11 (Advisory No. 11 of 2026)’ ರ ಪ್ರಕಾರ, ‘ಪ್ರೆಸ್ ಮತ್ತು ನಿಯತಕಾಲಿಕೆಗಳ ನೋಂದಣಿ (PRB) ಕಾಯ್ದೆ, 2023’ ರ ಸೆಕ್ಷನ್ 7 ರ ಅಡಿಯಲ್ಲಿ ಪ್ರತಿ ನೋಂದಾಯಿತ ನಿಯತಕಾಲಿಕೆಯು ನಿಗದಿತ ಅವಧಿಯೊಳಗೆ ತನ್ನ ವಾರ್ಷಿಕ ಹೇಳಿಕೆಯನ್ನು ‘ಪ್ರೆಸ್ ಸೇವಾ ಪೋರ್ಟಲ್ (Press Sewa Portal)’ ಮೂಲಕ ಆನ್‌ ಲೈನ್‌ನಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ. ಕಾಯ್ದೆಯ ಸೆಕ್ಷನ್ 14 ರ ಪ್ರಕಾರ, ಹಣಕಾಸು ವರ್ಷ ಮುಗಿದ ಒಂದು ವರ್ಷದೊಳಗೆ ವರದಿ ಸಲ್ಲಿಸಲು ವಿಫಲರಾಗುವ ಪ್ರಕಾಶಕರು ದಂಡನೆಗೆ ಗುರಿಯಾಗಲಿದ್ದಾರೆ.

ದಂಡದ ವಿವರಗಳು:

ಮೊದಲ ಬಾರಿಯ ಸುಸ್ತಿದಾರರಿಗೆ: ನಿಗದಿತ ದಿನಾಂಕದೊಳಗೆ ವರದಿ ಸಲ್ಲಿಸದಿದ್ದರೆ ಕನಿಷ್ಠ ರೂ. 10,000/- (ಹತ್ತು ಸಾವಿರ ರೂಪಾಯಿ) ದಂಡ ವಿಧಿಸಲಾಗುತ್ತದೆ.

ಮುಂದಿನ ಸರಣಿ ವೈಫಲ್ಯಗಳಿಗೆ: ಪ್ರತಿ ನಂತರದ ವರ್ಷದ ಸುಸ್ತಿಗೆ ದಂಡದ ಮೊತ್ತವು ದುಪ್ಪಟ್ಟಾಗುತ್ತಾ ಹೋಗುತ್ತದೆ (ಉದಾಹರಣೆಗೆ ಎರಡನೇ ಬಾರಿಗೆ ರೂ. 20,000/-).

ಗರಿಷ್ಠ ದಂಡದ ಮಿತಿ:

ಈ ದಂಡದ ಮೊತ್ತವು ಗರಿಷ್ಠ ರೂ. 2,00,000/- (ಎರಡು ಲಕ್ಷ ರೂಪಾಯಿ) ವರೆಗೆ ತಲುಪಬಹುದು.

ಕಾಲಾವಕಾಶ ವಿಸ್ತರಣೆ ಇಲ್ಲ:

ಸರ್ಕಾರವು ಜೂನ್ 30, 2026 ರ ಗಡುವಿನ ನಂತರ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ವಿಸ್ತರಿಸುವುದಿಲ್ಲ ಎಂದು  ತಿಳಿಸುತ್ತಾ, ನಿಯಮ ಉಲ್ಲಂಘಿಸುವ ಪ್ರಕಾಶಕರಿಂದ ಕಡ್ಡಾಯವಾಗಿ ದಂಡ ವಸೂಲಿ ಮಾಡಲಾಗುವುದು ಎಂದು ಪ್ರೆಸ್  ಡೆಪ್ಯುಟಿ ಪ್ರೆಸ್ ರಿಜಿಸ್ಟ್ರಾರ್ ಜನರಲ್ ರತ್ನಾಕರ್ ಪಾಮುಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular