Thursday, June 18, 2026
Google search engine

Homeರಾಜ್ಯಮತದಾನ ಹಕ್ಕು ಉಳಿಸಿಕೊಳ್ಳಿ ಗ್ಯಾರಂಟಿ ಯೋಜನೆ ಪಡೆಯಿರಿ : ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ...

ಮತದಾನ ಹಕ್ಕು ಉಳಿಸಿಕೊಳ್ಳಿ ಗ್ಯಾರಂಟಿ ಯೋಜನೆ ಪಡೆಯಿರಿ : ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ : ಡಿಕೆ ಶಿವಕುಮಾರ್

ಬೆಂಗಳೂರು : ಮತದಾನ ಇದ್ದವರಿಗೆ ಮಾತ್ರ ಗ್ಯಾರಂಟಿ ಕೊಡುತ್ತೇವೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಅದೇ ಮಾತನ್ನ ಪುನರುಚ್ಚರಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಕೊಡಬೇಕು. ವೋಟಿಂಗ್ ಇಲ್ಲ ಅಂದರೇ ನಾವ್ಯಾಕೆ ಗ್ಯಾರಂಟಿ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ.

ಶಕ್ತಿ ಯೋಜನೆಯಡಿ ಪ್ರಯಾಣಿಸಲು ಗುರುತಿನ ಚೀಟಿ ಬೇಕು.   ಬಡವರಿಗೆ ಏನು ಕಾರ್ಯಕ್ರಮ ಕೊಟ್ಟಿದ್ದೇವೆ ಅನ್ನೋದನ್ನ ನೋಡಬೇಕು. ಯಾವುದೇ ಪಾರ್ಟಿ ಇದ್ದರೂ ಮತದಾನದ ಹಕ್ಕು ಉಳಿಸಬೇಕು. ಗ್ಯಾರಂಟಿ ಫಲಾನುಭವಿಗಳ ಬಗ್ಗೆ ಪರಿಶೀಲನೆ ಮಾಡುತ್ತೇವೆ.  ಮತದಾನದ ಹಕ್ಕನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿ.  ನಮ್ಮಲ್ಲೂ ತೊಂದರೆ ಆಗಲ್ಲ. ನಾವು ಸಹ ಗ್ಯಾರಂಟಿ ಕೊಡುತ್ತಿದ್ದೇವೆ ಎಂದು ಸಿಎಂ  ಡಿಕೆ ಶಿವಕುಮಾರ್ ತಿಳಿಸಿದರು.

RELATED ARTICLES
- Advertisment -
Google search engine

Most Popular