Friday, June 19, 2026
Google search engine

Homeರಾಜ್ಯಸುದ್ದಿಜಾಲರೌಡಿ ನಿಗ್ರಹಕ್ಕೆ ಬಂತೂ ಆಂಟಿ‌ ರೌಡಿ ಸ್ಕ್ವಾಡ್

ರೌಡಿ ನಿಗ್ರಹಕ್ಕೆ ಬಂತೂ ಆಂಟಿ‌ ರೌಡಿ ಸ್ಕ್ವಾಡ್

ಮೈಸೂರು: ನಗರದಲ್ಲಿ ರೌಡಿ ಆಸಾಮಿಗಳ ಮೇಲೆ ನಿಗಾ ವಹಿಸಿ ಅವರ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಲು ಹಾಗೂ ರೌಡಿ ಆಸಾಮಿಗಳ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಜರುಗಿಸುವ ಸಂಬಂಧ ನಗರದ 4 ಉಪ ವಿಭಾಗಗಳು ಹಾಗೂ 18 ಪೊಲೀಸ್ ಠಾಣೆಗಳಲ್ಲಿ ರೌಡಿ ಪ್ರತಿಬಂಧಕ ದಳ(ಆಂಟಿ ರೌಡಿ ಸ್ಕ್ವಾಡ್) ವನ್ನು ರಚನೆ ಮಾಡಲಾಗಿದೆ.

ಈ ಕುರಿತು ಮೊದಲ ಸಭೆ ನಡೆಸಿ ಮಾತನಾಡಿ ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಮಾತನಾಡಿ, ಪ್ರತಿ ವಿಭಾಗ, ಠಾಣೆಗಳಲ್ಲಿ ಪಿ.ಎಸ್.ಐ. ನೇತೃತ್ವದಲ್ಲಿ ರೌಡಿ ಪ್ರತಿಬಂಧಕ ದಳಗಳನ್ನು ರಚಿಸಿದ್ದು, ನಗರದಲ್ಲಿ ಒಟ್ಟು 108 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ. ವಿಭಾಗದ ಎ.ಸಿ.ಪಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದರು.

ವಿಭಾಗ, ಠಾಣಾ ಮಟ್ಟದ ರೌಡಿ ಪ್ರತಿಬಂಧಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ಸಭೆಯನ್ನು ನಡೆಸಿ. ಅಧಿಕಾರಿ ಮತ್ತು ಸಿಬ್ಬಂದಿಗಳು ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳ ಕುರಿತು ಸೂಕ್ತ ತಿಳುವಳಿಕೆ ಮತ್ತು ಮಾರ್ಗದರ್ಶನ ನೀಡಿರುತ್ತಾರೆ.

ಮೈಸೂರು ನಗರದಲ್ಲಿ ರೌಡಿ ಚಟುವಟಿಕೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular