Monday, June 22, 2026
Google search engine

Homeಸ್ಥಳೀಯಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರ ಬೈಕ್ ರ್ಯಾಲಿ

ಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರ ಬೈಕ್ ರ್ಯಾಲಿ

ರಾಮನಗರ :  ಬಿಡದಿಯ ಟೌನ್ ಶಿಪ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ರೈತರು ಸಿಡಿದೆದ್ದಿದ್ದು ಇಂದು ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ರಾಜ್ಯರೈತ ಸಂಘದ ವತಿಯಿಂದ  ರೈತರು ಬಿಡದಿಯಿಂದ ಭೈರಮಂಗಲದವರೆಗೂ ಬೃಹತ್ ರ್ಯಾಲಿ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.  ಬಿಡದಿ ಪಟ್ಟಣದ ರಸ್ತೆಯಲ್ಲಿ ಕುಳಿತು ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಾರೆ.

ಬಿಡದಿ ಭಾಗದ ರೈತರಿಗೆ ಹಲವು ಭಾಗದ ರೈತರು ಸಹ ಬೆಂಬಲ ನೀಡಿದ್ದು ರೈತರ ಭೂಮಿ ಸ್ವಾಧೀನಪಡಿಸಿಕೊಂಡು  ಟೌನ್ ಶಿಪ್ ನಿರ್ಮಾಣ ಬೇಡ ಎಂದು ಪಟ್ಟು ಹಿಡಿದಿದ್ದಾರೆ.

RELATED ARTICLES
- Advertisment -
Google search engine

Most Popular