Wednesday, June 24, 2026
Google search engine

Homeರಾಜಕೀಯಪೋಸ್ಟರ್ ರಾಜಕೀಯಕ್ಕೆ ನಿಖಿಲ್ ತಿರುಗೇಟು : 100 ಎಕರೆ ಆರೋಪ ಸಾಬೀತುಪಡಿಸಿ : ನಿಖಿಲ್ ಸವಾಲ್

ಪೋಸ್ಟರ್ ರಾಜಕೀಯಕ್ಕೆ ನಿಖಿಲ್ ತಿರುಗೇಟು : 100 ಎಕರೆ ಆರೋಪ ಸಾಬೀತುಪಡಿಸಿ : ನಿಖಿಲ್ ಸವಾಲ್

ಬೆಂಗಳೂರು : ‘ಏನ್ ಬದನೆಕಾಯಿ ಬೆಳೆದು ಆಸ್ತಿ ಸಂಪಾದನೆ ಮಾಡಿದ್ರಾ? ಬದನೆಕಾಯಿ ಬೆಳೆದು ಕಾಲೇಜು ಕಟ್ಟಿದ್ರಾ?’ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಎದುರಾಳಿಗಳು ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದರು, ತಮ್ಮ ಕುಟುಂಬದ ಆಸ್ತಿ ಮತ್ತು ವ್ಯವಹಾರಗಳ ಬಗ್ಗೆ ಈ ರೀತಿಯ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ಪತ್ನಿ ಹೆಸರಿನಲ್ಲಿ 100 ಎಕರೆ ಜಾಗ ಆರೋಪ ಮಾಡಿರುವ ಸಚಿವ ಎಂ.ಬಿ. ಪಾಟೀಲ್​​ ವಿರುದ್ಧ ಹರಿಹಾಯ್ದ ನಿಖಿಲ್​​ ಕುಮಾರಸ್ವಾಮಿ, ಎಂಬಿ ಪಾಟೀಲ್‌ರನ್ನು ಗೌರವಾನ್ವಿತ ಮತ್ತು ವಿದ್ಯಾವಂತ ಸಚಿವರು ಎಂದು ತಿಳಿದಿದ್ದೆ. ಕುಮಾರಸ್ವಾಮಿ ಅವರ ಪತ್ನಿಯ ಹೆಸರಿನಲ್ಲಿ ಆ ಪ್ರದೇಶದಲ್ಲಿ 100 ಎಕರೆ ಜಾಗ ಇದೆ ಎಂದು ಅವರು ಸಾಬೀತುಪಡಿಸಬೇಕು. ಆಗದಿದ್ದರೆ ಅವರು ತಕ್ಷಣ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಮಾನಹಾನಿ ಮೊಕದ್ದಮೆ ಹೂಡಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಬಾಯಿಗೆ ಬಂದಂತೆ ನೂರಾರು ಎಕರೆ ಜಾಗವಿದೆ ಎಂದು ಸುಳ್ಳು ಆರೋಪ ಮಾಡಬಾರದು. ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಎಂಬಿ ಪಾಟೀಲ್‌ ವಿರುದ್ಧ ಕಿಡಿ ಕಾರಿದ್ದಾರೆ.

ಇನ್ನೂ ಪೋಸ್ಟರ್ ಅಭಿಯಾನದ ವಿರುದ್ಧ ಮಾತನಾಡಿದ ನಿಖಿಲ್,ಇವರೇನು ಬದನೆಕಾಯಿ ಬೆಳೆದು ಸ್ಕೂಲು ಕಾಲೇಜು ಕಟ್ಟಿದ್ದಾರಾ? ನಮಗೂ ಪೋಸ್ಟರ್ ಅಭಿಯಾನ ಮಾಡಲು ಬರುತ್ತದೆ. ಗಂಡಸ್ತನದ ರಾಜಕೀಯ ಮಾಡಿ, ರಾತ್ರೋ ರಾತ್ರಿ ತಲೆ ಮೇಲೆ ಟವೆಲ್ ಹಾಕೊಂಡು ಪೋಸ್ಟರ್ ಅಂಟಿಸೋದನ್ನ ನಮ್ಮ ಕಾರ್ಯಕರ್ತರು ಮಾಡ್ತಾರೆ, ಆದರೆ ಅವರಂತೆ ನಾವು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ಪೋಸ್ಟರ್ ಅಭಿಯಾನ ನಡೆಸಿದ್ದಾರೆ. ಬಿಡದಿ ಮತ್ತು ಬೈರಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪೋಸ್ಟರ್‌ಗಳನ್ನು ಹಾಕಲಾಗಿದೆ. ಈ ಪೋಸ್ಟರ್‌ಗಳಲ್ಲಿ ಹಲಗೆವಡೇರಹಳ್ಳಿ ಮತ್ತು ಕೇತಗಾನಹಳ್ಳಿ ಭೂ ಹಗರಣದಲ್ಲಿ ಭಾಗಿಯಾದ ಆರೋಪವನ್ನು ಮಾಡಲಾಗಿದ್ದು, “ಜೈಲಿಗೆ ಹೋಗಲು ಸಿದ್ಧರಾಗಿ” ಎಂಬ ಸಂದೇಶವನ್ನು ಪ್ರಮುಖವಾಗಿ ಪ್ರದರ್ಶಿಸಲಾಗಿದೆ.

RELATED ARTICLES
- Advertisment -
Google search engine

Most Popular