Monday, July 13, 2026
Google search engine

Homeರಾಜ್ಯರಾಮಮಂದಿರ ಹುಂಡಿ ಹಣ ಪ್ರಕರಣ ಮರುಕಳಿಸದಿರಲಿ : RSS ಕಳವಳ

ರಾಮಮಂದಿರ ಹುಂಡಿ ಹಣ ಪ್ರಕರಣ ಮರುಕಳಿಸದಿರಲಿ : RSS ಕಳವಳ

ಬೆಳಗಾವಿ : ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಎಣಿಕೆಯಲ್ಲಿ ನಡೆದಿರುವ ಆರೋಪಿತ ಅಕ್ರಮ ಪ್ರಕರಣದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತೀವ್ರ ವಿಷಾದ ವ್ಯಕ್ತಪಡಿಸಿದ್ದು, ವಿಶೇಷ ತನಿಖಾ ದಳ (SIT) ಮತ್ತು ಪೊಲೀಸರ ತನಿಖೆ ಶೀಘ್ರದಲ್ಲೇ ನಿರ್ಣಾಯಕ ಹಂತ ತಲುಪಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಬೆಳಗಾವಿಯಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್‌ನ ಸಮಾರೋಪದ ಬಳಿಕ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿಯ ಮೇರೆಗೆ ಆರಂಭವಾಗಿರುವ ಎಸ್‌ಐಟಿ ತನಿಖೆ ಸಮಗ್ರವಾಗಿ ನಡೆಯುತ್ತಿದ್ದು, ಸತ್ಯಾಂಶ ಹೊರಬರಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತೀರ್ಥ ಕ್ಷೇತ್ರ ಟ್ರಸ್ಟ್ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ದೇಶದ ಕೋಟ್ಯಂತರ ರಾಮಭಕ್ತರ ಭಕ್ತಿ ಮತ್ತು ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಘ ತಿಳಿಸಿದೆ.

ಜೂನ್‌ನಲ್ಲಿ ಬೆಳಕಿಗೆ ಬಂದಿತ್ತು ಪ್ರಕರಣ : ರಾಮಮಂದಿರದ ಹುಂಡಿ ಹಣ ದುರ್ಬಳಕೆಯ ಆರೋಪ ಜೂನ್ 7ರಂದು ಬೆಳಕಿಗೆ ಬಂದಿತ್ತು. ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ಎಸ್‌ಐಟಿ ಸಲ್ಲಿಸಿದ ಪ್ರಾಥಮಿಕ ವರದಿ ಆಧರಿಸಿ ಜೂನ್ 25ರಂದು ಎಫ್‌ಐಆರ್ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಂಡಿ ಸಂಗ್ರಹ ಮತ್ತು ಹಣ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ವಾರ್ಷಿಕ ಸಭೆಯಲ್ಲಿ ಹಲವು ವಿಷಯಗಳ ಚರ್ಚೆ : ಜುಲೈ 10ರಿಂದ 12ರವರೆಗೆ ನಡೆದ ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 226 ಕಾರ್ಯಕರ್ತರು ಭಾಗವಹಿಸಿದ್ದರು.

ಸಭೆಯಲ್ಲಿ ದೇಶಾದ್ಯಂತ ನಡೆದ ಸಂಘ ಶಿಕ್ಷಣ ವರ್ಗಗಳು ಮತ್ತು ಕಾರ್ಯಕರ್ತ ಅಭಿವೃದ್ಧಿ ವರ್ಗಗಳ ಪರಿಶೀಲನೆ ನಡೆಸಲಾಯಿತು. 83 ಸಂಘ ಶಿಕ್ಷಣ ವರ್ಗಗಳು ಹಾಗೂ 12 ಕಾರ್ಯಕರ್ತ ಅಭಿವೃದ್ಧಿ ವರ್ಗಗಳಲ್ಲಿ ಒಟ್ಟು 18,842 ಸ್ವಯಂಸೇವಕರು ತರಬೇತಿ ಪಡೆದಿದ್ದಾರೆ ಎಂದು ಸಂಘ ತಿಳಿಸಿದೆ. ತರಬೇತಿ ಶಿಬಿರಗಳಲ್ಲಿ ದೈನಂದಿನ ಶಾಖೆ, ಗ್ರಾಮಾಭಿವೃದ್ಧಿ, ಕುಟುಂಬ ಪ್ರಬೋಧನ, ವಿಪತ್ತು ನಿರ್ವಹಣೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳಿಗೆ ಆದ್ಯತೆ ನೀಡಲಾಗಿತ್ತು.

ಶತಮಾನೋತ್ಸವ ಮತ್ತು ಸಾಮಾಜಿಕ ಕಾರ್ಯಗಳಿಗೆ ಒತ್ತು : ಸಭೆಯಲ್ಲಿ ಸಂಘದ ಶತಮಾನೋತ್ಸವ ಕಾರ್ಯಕ್ರಮಗಳು, ಶಾಖಾ ವಿಸ್ತರಣೆ, ಸಾಮಾಜಿಕ ಸೇವಾ ಚಟುವಟಿಕೆಗಳು ಹಾಗೂ ಪಂಚ ಪರಿವರ್ತನ ಅಭಿಯಾನಕ್ಕೆ ಹೆಚ್ಚಿನ ವೇಗ ನೀಡುವ ಕುರಿತು ಚರ್ಚೆ ನಡೆಯಿತು. ಇದೇ ವೇಳೆ 2026–27ನೇ ಸಾಲಿನ ಮೋಹನ್ ಭಾಗವತ್ ಅವರ ಪ್ರವಾಸ ಕಾರ್ಯಕ್ರಮವೂ ಪರಿಶೀಲಿಸಲಾಯಿತು.

ಜನಸಂಖ್ಯೆ ಮತ್ತು ಮಾದಕ ವ್ಯಸನ ಕುರಿತು ಚರ್ಚೆ : ಜನಗಣತಿ, ಜನಸಂಖ್ಯೆ ಅಸಮತೋಲನ, ಹೆಚ್ಚುತ್ತಿರುವ ಮಾದಕ ವ್ಯಸನ ಮತ್ತು ವ್ಯಸನಮುಕ್ತಿಯ ಅಗತ್ಯ ಸೇರಿದಂತೆ ಸಮಕಾಲೀನ ಸಾಮಾಜಿಕ ವಿಚಾರಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು. ಜೊತೆಗೆ ಸಂತ ಶಿರೋಮಣಿ ರವಿದಾಸ್ ಮಹಾರಾಜರ 650ನೇ ಜನ್ಮ ವಾರ್ಷಿಕೋತ್ಸವ ಆಚರಣೆಯ ರೂಪುರೇಷೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.

RELATED ARTICLES
- Advertisment -
Google search engine

Most Popular