Wednesday, July 15, 2026
Google search engine

Homeರಾಜ್ಯಬಿಡದಿ ಟೌನ್ ಶಿಪ್ ; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ.ಕೆ.ಶಿವಕುಮಾರ್ ಅಭಯ

ಬಿಡದಿ ಟೌನ್ ಶಿಪ್ ; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ.ಕೆ.ಶಿವಕುಮಾರ್ ಅಭಯ

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ಯಾವುದೇ ರೈತರಿಂದ ಬಲವಂತವಾಗಿ ಜಮೀನು ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸ್ವಇಚ್ಛೆಯಿಂದ ಭೂಮಿ ನೀಡಲು ಮುಂದೆ ಬರುವ ರೈತರಿಗೆ ಮಾತ್ರ ಸೂಕ್ತ ಪರಿಹಾರ ನೀಡಿ ಜಮೀನು ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ರೈತರ ಅಹವಾಲು ಮತ್ತು ಅಭಿಪ್ರಾಯಗಳನ್ನು ಆಲಿಸಲು ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು ಎಂದರು.

ಜಮೀನು ಕೊಡಲು ಇಷ್ಟವಿಲ್ಲದವರು ನೆಮ್ಮದಿಯಾಗಿರಿ : ಯಾರ ಆಸ್ತಿಯನ್ನೂ ಬಲವಂತವಾಗಿ ಪಡೆಯುವುದಿಲ್ಲ. ಜಮೀನು ನೀಡಲು ಇಷ್ಟವಿಲ್ಲದವರು ತಮ್ಮ ಜಮೀನಿನಲ್ಲೇ ನೆಮ್ಮದಿಯಾಗಿ ಇರಬಹುದು. ನಾನು ಯಾರಿಗೂ ಬಲವಂತ ಮಾಡುವುದಿಲ್ಲ. ಅವರು ಹೊರಡಿಸಿರುವ ರೆಡ್ ಜೋನ್ ಆದೇಶ ಮುಂದುವರಿಯುತ್ತದೆ.

ಭೂಮಿ ನೀಡಲು ಇಷ್ಟವಿಲ್ಲದವರಿಗೆ ನಾನು ಬಲವಂತ ಮಾಡುವುದಿಲ್ಲ. ನಾನು ರೈತರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಇಷ್ಟವಿಲ್ಲದವರು ಅವರ ಭೂಮಿ ಅವರೇ ಇಟ್ಟುಕೊಳ್ಳಲಿ. ಕುಮಾರಸ್ವಾಮಿ ಅವರು ಪ್ರತಿ ಎಕರೆಗೆ 8 ಸಾವಿರ ಅಡಿ ಅಭಿವೃದ್ಧಿಪಡಿಸಿದ ಭೂಮಿ ನೀಡಲು ಮುಂದಾಗಿದ್ದರು. ನಾವು 50% ಅಂದರೆ 9500 ಅಡಿ ಭೂಮಿ ನೀಡಲು ತೀರ್ಮಾನಿಸಿದೆವು. ಸ್ವಯಂ ಇಚ್ಛೆಯಿಂದ ಬರುವವರಿಗೆ ಪರಿಹಾರ ನೀಡಿ ಭೂಮಿ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜಕೀಯಕ್ಕೆ ಬಲಿಯಾಗಬೇಡಿ, ನಿಮ್ಮ ಬದುಕು ನೀವು ಕಟ್ಟಿಕೊಳ್ಳಿ; ರೈತರಿಗೆ ಮನವಿ

ರೈತರು ಹೋರಾಟ ಧರಣಿ ಬಿಟ್ಟು ನಿಮ್ಮ ಬದುಕು ಕಟ್ಟಿಕೊಳ್ಳಿ : ರಾಜಕೀಯಕ್ಕಾಗಿ ಇವರು ನಿಮ್ಮನ್ನು ಬಲಿ ಕೊಡುತ್ತಿದ್ದಾರೆ. ನೀವು ಬಲಿಯಾಗಬೇಡಿ. ಸಮಿತಿಯವರು ನಿಮ್ಮ ಬಳಿಗೆ ಬಂದಾಗ, ಸಮಿತಿ ಮುಂದೆ ನಿಮ್ಮ ಅಭಿಪ್ರಾಯ ಹೇಳಿಕೊಳ್ಳಿ. ಹೊಡೆಯುವುದಾದರೆ ಬಂದು ನನಗೆ ಹೊಡೆಯಿರಿ” ಎಂದು ಮನವಿ ಮಾಡಿದರು.

ಹೊಡೆಯಬೇಕಾದರೆ ನನಗೆ ಹೊಡೆಯಿರಿ : ಅಧಿಕಾರಿಗಳ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿದ ಸಿಎಂ, ತಪ್ಪು ಮಾಡಿದ್ದರೆ ಅಧಿಕಾರಿಗಳಿಗೆ ಅಲ್ಲ, ನನಗೆ ಬಂದು ಪ್ರಶ್ನಿಸಿ. ಹೊಡೆಯಬೇಕಾದರೆ ನನಗೆ ಹೊಡೆಯಿರಿ, ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ : ಬಿಡದಿ ಟೌನ್‌ಶಿಪ್ ತಮ್ಮ ವೈಯಕ್ತಿಕ ಕನಸಿನ ಯೋಜನೆ ಅಲ್ಲ ಎಂದು ಹೇಳಿದ ಸಿಎಂ, ಈ ಯೋಜನೆ 2006ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಆರಂಭವಾಗಿತ್ತು ಎಂದು ಆರೋಪಿಸಿದರು.

ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಿ ಭದ್ರತಾ ಠೇವಣಿ ಪಡೆದವರು ಯಾರು ಎಂದು ಪ್ರಶ್ನಿಸಿದ ಅವರು, “ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ಯಾರು?” ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಯೋಜನೆಯಲ್ಲಿ ಹಿಂದೆ ಸರ್ಕಾರಗಳು ಕೈಗೊಂಡ ನಿರ್ಧಾರಗಳನ್ನೇ ಮುಂದುವರಿಸುತ್ತಿದ್ದೇನೆ. ನನ್ನದು ಹೊಸ ಯೋಜನೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜೈಲು ಹೇಳಿಕೆಗೆ ತಿರುಗೇಟು : ತಮ್ಮನ್ನು ಜೈಲಿಗೆ ಕಳುಹಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಜೈಲು ನನಗೆ ಹೊಸದಲ್ಲ. ಜನರ ಆಶೀರ್ವಾದದಿಂದ ಮತ್ತೆ ಮುಖ್ಯಮಂತ್ರಿಯಾಗಿ ಬಂದಿದ್ದೇನೆ. ನನ್ನ ಮೇಲೆ ಯಾವುದೇ ಪ್ರಯತ್ನ ಮಾಡಿದರೂ ಎದುರಿಸಲು ಸಿದ್ಧನಿದ್ದೇನೆ” ಎಂದರು.

RELATED ARTICLES
- Advertisment -
Google search engine

Most Popular