Wednesday, July 15, 2026
Google search engine

Homeರಾಜ್ಯಬೆಂಗಳೂರು ಶಾಸಕರ ಸಭೆಗೆ ಗೈರು : ಅಸಮಾಧಾನದ ವದಂತಿಗಳಿಗೆ ತೆರೆ ಎಳೆದ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು ಶಾಸಕರ ಸಭೆಗೆ ಗೈರು : ಅಸಮಾಧಾನದ ವದಂತಿಗಳಿಗೆ ತೆರೆ ಎಳೆದ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು : ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆದಿದ್ದ ಬೆಂಗಳೂರಿನ ಶಾಸಕರ ಸಭೆಗೆ ಗೈರು ಹಾಜರಾಗಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಸಮಸ್ಯೆಗಳಿದ್ದ ಶಾಸಕರು ಮಾತ್ರ ಮುಖ್ಯಮಂತ್ರಿಗಳ ಸಭೆಗೆ ಹೋಗಿದ್ದರು. ಸದ್ಯ ನನಗೆ ಯಾವುದೇ ಸಮಸ್ಯೆಗಳಿಲ್ಲ, ಹಾಗಾಗಿ ನಾನು ಸಭೆಗೆ ಹೋಗುವ ಅಗತ್ಯವಿರಲಿಲ್ಲ,” ಎಂದು ತಿಳಿಸಿದರು.

ಸಭೆಯ ಮಹತ್ವದ ಬಗ್ಗೆ ವಿವರಿಸಿದ ಅವರು, “ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ ಅವರು ಬಿಎಂಡಿಎ (BMRDA) ಮತ್ತು ಬಿಡಿಎ (BDA) ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಆಯಾ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದ ಶಾಸಕರು ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದ್ದಾರೆ. ನನಗೆ ಅಂತಹ ಯಾವುದೇ ವಿಷಯಗಳ ಕುರಿತು ಚರ್ಚೆ ಅಗತ್ಯವಿಲ್ಲದ ಕಾರಣ ಸಭೆಯಿಂದ ದೂರ ಉಳಿದೆ,” ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿ ಖಾತೆ ಸಿಗದಿರುವ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿದ್ದಾರೆ ಎಂಬ ಮಾಧ್ಯಮಗಳ ವರದಿಗಳನ್ನು ಸಚಿವರು ತಳ್ಳಿಹಾಕಿದರು. “ಅದೆಲ್ಲಾ ಹಳೆಯ ಕಥೆ. ಒಂದು ವೇಳೆ ನನಗೆ ಅಸಮಾಧಾನವಿದ್ದಿದ್ದರೆ ನಾನು ಕೆಲಸ ಮಾಡಲು ವಿಧಾನಸೌಧಕ್ಕೇ ಬರುತ್ತಿರಲಿಲ್ಲ,” ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.

ಇದೇ ವೇಳೆ, ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಚಿವ ರಾಮಲಿಂಗಾ ರೆಡ್ಡಿ ನಿರಾಕರಿಸಿದರು.

RELATED ARTICLES
- Advertisment -
Google search engine

Most Popular