Wednesday, May 21, 2025
Google search engine

Homeರಾಜ್ಯಸುದ್ದಿಜಾಲಅಪ್ಪಟ ಗ್ರಾಮೀಣ ಪ್ರತಿಭೆ  ಚಿಕ್ಕ ಹೊಸಗಾವಿಯ ಎ.ಜಯರಾಂ  ಶೈಕ್ಷಣಿಕ ಹೆಜ್ಜೆ

ಅಪ್ಪಟ ಗ್ರಾಮೀಣ ಪ್ರತಿಭೆ  ಚಿಕ್ಕ ಹೊಸಗಾವಿಯ ಎ.ಜಯರಾಂ  ಶೈಕ್ಷಣಿಕ ಹೆಜ್ಜೆ

ಮದ್ದೂರು :- ವಿಮಾನಯಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ವಿಮಾನ ನಿಲ್ದಾಣದ ಶಬ್ದ ನಿರ್ವಹಣೆಯ ಬಗ್ಗೆ ಅಧ್ಯಯನ ಮಾಡಿ ಪಿ ಎಚ್ ಡಿ ಪದವಿ ಪಡೆದು ಸಾಧಕರ ಸಾಲಿನಲ್ಲಿ ನಿಂತ ಚಿಕ್ಕ ಹೊಸಗಾವಿಯ  ಜಯರಾಂ,ಎ ಮಂಡ್ಯ ಜಿಲ್ಲೆಯ ಅಪ್ಪಟ ಗ್ರಾಮೀಣ ಪ್ರತಿಭೆ.

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ತಾಂತ್ರಿಕ ಶಿಕ್ಷಣ ಯಶಸ್ವಿಯಾಗಿ ಪೂರೈಸಿ, ಎಂ ಟೆಕ್ ಮಾಡಿದರೂ ಸಹ ಇವರ ಕಲಿಯುವ ಹಂಬಲ ಪಿ ಎಚ್ ಡಿ ಹಂತಕ್ಕೆ ತಲುಪಿದೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಜ್ಞಾನಗಳ ವಿಭಾಗದಲ್ಲಿ  ‘ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಶಬ್ದ ನಿರ್ವಹಣೆ’ ವಿಷಯ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿ ಎಚ್ ಡಿ ಗೌರವ ಸಂದಿದೆ.

ಜಿಲ್ಲೆಯ ಮದ್ದೂರು ತಾಲ್ಲೂಕು ಕೊಪ್ಪ ಹೋಬಳಿಯ ಚಿಕ್ಕಹೊಸಗಾವಿ ಗ್ರಾಮದ  ಮಂಚಮ್ಮ -ಅಂಕೇಗೌಡರ ಪುತ್ರರಾಗಿ 1967 ಜೂನ್ 1 ರಂದು ಜನಿಸಿದ ಜಯರಾಂ.ಎ.ರವರು ಹುಟ್ಟೂರಿನಲ್ಲಿ  ಪ್ರಾಥಮಿಕ,ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಪೂರೈಸಿದವರು.

ಇವರು ಮೂರು ವರ್ಷದವರಿದ್ದಾಗ ತಂದೆ ಸಾವನ್ನಪ್ಪಿದ್ದು,ತಾಯಿಯ ಪ್ರೀತಿಯಲ್ಲಿ ಬೆಳೆದು ಮಂಡ್ಯದ ಪಿಇಎಸ್ ವಿಜ್ಞಾನ ಕಾಲೇಜನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದರು. ಇಂಜಿನಿಯರ್ ಆಗುವ ಕನಸು ಹೊತ್ತು ಸಿ.ಇ.ಟಿ ಪರೀಕ್ಷೆ ಬರೆದು ಪಾಸಾದರು ಆದರೆ ಇವರಿಗೆ ಸರ್ಕಾರಿ ಕೋಟಾದಲ್ಲಿ ಪ್ರವೇಶ ದೊರಕಿದ್ದು ಕಲ್ಲುರ್ಗಿ ಜಿಲ್ಲೆಯ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ, ಆದರೆ, ಒಬ್ಬನೇ ಮಗನನ್ನು ದೂರದ ಸ್ಥಳಕ್ಕೆ ಓದಲು ಕಳುಹಿಸಲು ತಾಯಿ ಒಪ್ಪಲಿಲ್ಲ.

 ಈ ವೇಳೆ ಕೆ.ವಿ.ಶಂಕರಗೌಡರನ್ನು ಭೇಟಿಯಾಗಿ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರವೇಶ ನೀಡಬೇಕೆಂದು ಕೋರಿಕೊಂಡಿದ್ದು ಅದರಂತೆ ಅವಕಾಶ ದೊರೆತು ಇಂಜಿನಿಯರಿಂಗ್ ಪದವಿ ಪಡೆದರು.

ಎಂ ಟೆಕ್ ಪದವಿ ಅಧ್ಯಯನ ಮಾಡಿ  ವಿವಿಧ ಕಡೆ ಕೆಲಸ ನಿರ್ವಸುತ್ತಾ ಅಂತಿಮವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಣೆ ಮಾಡುತ್ತಾ   ‘ಬೆಂಗಳೂರಿನ ಕಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಬ್ದ ನಿರ್ವಹಣೆ’ ಎಂಬ ವಿಷಯವಾಗಿ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೆ ಮಹಾ ಪ್ರಬಂಧವನ್ನು ಮಂಡಿಸಿ  ಪಿ.ಎಚ್‌ ಡಿ ಪದವಿ ಪಡೆದಿದ್ದಾರೆ..

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತಾಂತ್ರಿಕ ಶಿಕ್ಷಣದಲ್ಲಿ ಉನ್ನತ ಅಧ್ಯಯನ ಮಾಡಿ,  ಕರ್ತವ್ಯ ನಿರ್ವಹಿಸುತ್ತಲೇ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿದ ಚಿಕ್ಕ ಹೊಸಗಾವಿಯ ಜಯರಾಂ.ಎಂ.ರನ್ನ ಸಾಧಕರ ಸಾಲಿನಲ್ಲಿ ನೋಡುವುದಷ್ಟೇ ಅಲ್ಲ,ಅವರು ಬೆಳೆದ ಹಾದಿ ಇತರರಿಗೆ ಮಾದರಿ.

RELATED ARTICLES
- Advertisment -
Google search engine

Most Popular