ತುಮಕೂರು: ಆಹಾರ ಅರಸಿ ಬಂದ ನಾಲ್ಕು ವರ್ಷದ ಚಿರತೆಯೊಂದು ಕೋಳಿ ಫಾರಂನಲ್ಲಿ ಲಾಕ್ ಆಗಿದ್ದು, ಅರವಳಿಕೆ ಮದ್ದು ನೀಡಿ ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆಯಲ್ಲಿ ಘಟನೆ ನಡೆದಿದೆ. ಮರಿಗೌಡಯ್ಯ ಎಂಬುವರಿಗೆ ಕೋಳಿ ಫಾರಂ ಸೇರಿದೆ.
ಇಂದು ಬೆಳಗ್ಗೆ ಆಹಾರ ಅರಸಿ ಬಂದಿದ್ದು, ಮತ್ತೆ ವಾಪಸ್ ಹೋಗಲು ದಾರಿ ತಿಳಿಯದೇ ಸೆರೆ ಆಗಿದೆ. ಚಿರತೆ ಕಂಡು ಗಾಬರಿಯಾದ ಕೋಳಿ ಫಾರಂ ಸಿಬ್ಬಂದಿಗಳು, ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅರವಳಿಕೆ ತಜ್ಞರು ಹಾಗೂ ಸಹಾಯಕ ನಿರ್ದೇಶಕರಾದ ಡಾ. ಕೆ.ಎಸ್ ಉಮಾಶಂಕರ್‌ರಿಂದ ಚಿರತೆಗೆ ಅರವಳಿಕೆ ಮದ್ದು ನೀಡಿ ಅರಣ್ಯ ಅಧಿಕಾರಿಗಳು ರಕ್ಷಣೆ ಮಾಡಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಚಿರತೆಯನ್ನು ತೆಗೆದುಕೊಂಡು ಹೋಗಲಾಗಿದೆ.