ಮಂಡ್ಯ: ನಾರಾಯಣ ಸೇವಾ ಸಂಸ್ಥಾನ ಹಾಗೂ ಮಂಡ್ಯ ಜೈನ ಸಮಾಜದ ವತಿಯಿಂದ ಮಂಡ್ಯದ ಕಲ್ಲಹಳ್ಳಿಯ ಎಪಿಎಂಸಿ ರೈತ ಸಭಾಂಗಣದಲ್ಲಿ ವಿಕಲ ಚೇತನರಿಗೆ ಉಚಿತ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮನ್ನು ಮಾಜಿ ಸಚಿವ ಆತ್ಮಾನಂದ ಉದ್ಘಾಟಿಸಿದರು.
ಈ ವೇಳೆ ವಿಕಲಚೇತನರನ್ನ ತಪಾಸಣಾ ಮಾಡಿ ಮಾಡ್ಯುಲರ್ ಕೃತಕ ಅಂಗಗಳ ಮಾಪನ ಮಾಡಲಾಯಿತು.
ಮಂಡ್ಯ ಜಿಲ್ಲಾದ್ಯಂತ ನೂರಾರು ವಿಕಲಚೇತರಿಗೆ ಕೃತಕ ಕೈ ಕಾಲು ಜೋಡಣೆಗೆ ನೋಂದಣಿ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದ ಜೈನ ಸಮಾಜದ ಮುಖಂಡ ಪುಟ್ರಮುಲ್ ಜೈನ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜೈನ ಸಮಾಜದ ಮುಖಂಡರು ಭಾಗಿಯಾಗಿದ್ದಾರೆ.