ಬೆಟ್ಟದಪುರ: ಚಿಕ್ಕಮಳಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು 2022 – 2023 ನೇ ಸಾಲಿಗೆ ರೂ.1,31,800 ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಚಿಕ್ಕಮಳಲಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪ್ರಾರಂಭವಾದ ಈ ಡೈರಿಯು ಉತ್ತಮ ಲಾಭಾಂಶಗಳಿಸಿದೆ. ಇದೇ ರೀತಿ ಮುಂದುವರೆಸಿಕೊಂಡು ಹೋದರೆ ಕೆಲವು ದಿನಗಳಲ್ಲಿ ಸಂಘವು ಸ್ವಂತ ಕಟ್ಟಡವನ್ನು ಹೊಂದಬಹುದು ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಶಾಂತಮ್ಮ ವೆಂಕಟೇಶ್, ಉಪಾಧ್ಯಕ್ಷೆ ಸಣ್ಣಮ್ಮ ರಾಜೇಗೌಡ, ನಿರ್ದೇಶಕರಾದ ಇಂದ್ರಮ್ಮ ನಾಗನಾಯಕ, ಶಿವಮ್ಮ ಸಣ್ಣಸ್ವಾಮಿನಾಯಕ, ರುಕ್ಮಿಣಿ ಮಂಜೇಗೌಡ, ರೇಣುಕಾ ಸ್ವಾಮೀ, ಶೈಲಜಾ ಕುಮಾರ್, ಸರೋಜಮ್ಮ ಬೈರನಾಯಕ, ವರಲಕ್ಷ್ಮಿ ರಮೇಶ್ ನಾಯಕ, ಪಲ್ಲವಿ ಪ್ರಕಾಶ್, ಮಂಜುಳಾ ಶ್ರೀನಿವಾಸಶೆಟ್ಟಿ, ಕಾರ್ಯದರ್ಶಿ ಮಹದೇವಮ್ಮ, ಹಾಲು ಪರೀಕ್ಷಕ ಶಿವಶಂಕರ್, ಸಿಬ್ಬಂದಿ ಲೋಕೇಶ್ ಸೇರಿದಂತೆ ಸಂಘದ ಸದಸ್ಯರು ಇದ್ದರು.