ಹೆಚ್.ಡಿ.ಕೋಟೆ: ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳದೇ ಬಿಟ್ಟಿರೋ ಅಭಿವೃದ್ಧಿ ಕೆಲಸಗಳೇ ಇಲ್ಲ ಎಂದು ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ ತಿಳಿಸಿದರು.
ಎಚ್.ಡಿ. ಕೋಟೆ ತಾಲ್ಲೂಕಿನ ಹಂಪಾಪುರ ಸಮೀಪದ ಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಹಂಪಾಪುರ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೂ ಸಹ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಕಲ್ಪ ತೊಟ್ಟು ಇಂದು ಆತನಿಗೂ ಹಲವು ಯೋಜನೆಗಳು ತಲುಪಿವೆ ಎಂದರು.
ಸರ್ಕಾರ ಮಾಡದ ಕೆಲಸ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಲ್ಲಿ ಮಾಡುತ್ತಿದೆ, ಈ ಯೋಜನೆಗಳನ್ನು ಸರ್ಕಾರವೇನಾದರೂ ಅಳವಡಿಸಿಕೊಂಡರೆ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಸರ್ಕಾರಗಳು ನಡೆಸಬಹುದು ಎಂದರು.

ಯೋಜನೆಯ ವಿಭಾಗ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಎಚ್.ಡಿ. ಕೋಟೆಯಲ್ಲಿ ೧೬೦ ಶಾಸನಗಳಿವೆ. ಎಚ್.ಡಿ. ಕೋಟೆಯ ಆನೆಗಳಿಲ್ಲದೇ ದಸರಾ ಹಿಂದೆ ನಡೆಯುತ್ತಿರಲಿಲ್ಲ ಅಂತಹ ಮಹತ್ತರವಾದ ಇತಿಹಾಸವಿರುವ ತಾಲ್ಲೂಕು ನಮ್ಮ ಎಚ್.ಡಿ.ಕೋಟೆ ತಾಲ್ಲೂಕು ಎಂದರು.
ರಾಜ್ಯದಲ್ಲಿ 66.65 ಲಕ್ಷ ಜನರಿಗೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮುಖಾಂತರ ಪ್ರತಿಷ್ಠಿತ 7 ಬ್ಯಾಂಕ್‌ಗಳಲ್ಲಿ 40 ಸಾವಿರ ಕೋಟಿ ಸಾಲವನ್ನು ನೀಡಿವೆ ಎಂದರು.
45 ಸಾವಿರ ಮಂದಿ ಸಂಸ್ಥೆಯ ನೌಕರರಿಗೆ ತಿಂಗಳಿಗೆ ವೇತನವನ್ನು ಸಂಸ್ಥೆಯು ನೀಡುತ್ತಿದೆ. ತಾಲ್ಲೂಕಿನ ಮೂರು ಸಾವಿರ ಸಂಘಗಳಿಗೆ 101 ಕೋಟಿ ಹಣ ಮಂಜೂರು ಮಾಡಲಾಗಿದೆ. ಒಂದು ಕೋಟಿ ವೆಚ್ಚದಲ್ಲಿ 8 ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ತಾಲ್ಲೂಕಿನ ಶಾಲೆಗಳಿಗೆ ಎಂಟು ಶಿಕ್ಷಕರನ್ನು ನೇಮಿಸಲಾಗಿದೆ. ರಾಜ್ಯದಲ್ಲಿ ಯೋಜನೆಯಲ್ಲಿ 26 ಸಾವಿರ ಮಂದಿಗೆ ಮಾಸಾಶನವನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 400 ಮಂದಿ ವಿಶೇಷ ಚೇತನರಿಗೆ ಸಲಕರಣೆಯನ್ನು ವಿತರಿಸಲಾಗಿದೆ. ಜೊತೆಗೆ ನಿರಾಶ್ರಿತರಿಗೆ 30 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. 1778 ಮಧ್ಯವರ್ಜನ ಶಿಬಿರಗಳನ್ನು ರಾಜ್ಯದಲ್ಲಿ ಸಂಸ್ಥೆಯ ವತಿಯಿಂದ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಪುರ ಮಠದ ಚಂದ್ರಶೇಖರಸ್ವಾಮೀಜಿ, ಬರಡನಪುರದ ಮಹಾಂತೇಶ್ವರ ಮಠದ ಪರಶಿವಮೂರ್ತಿಸ್ವಾಮೀಜಿ, ಟಿಎಪಿಸಿಎಂಎಸ್ ಅಧ್ಯಕ್ಷ ಮೊತ್ತ ಬಸವರಾಜಪ್ಪ, ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಭಾಸ್ಕರ್, ಕಾಡಸೂರು ರಾಜಣ್ಣ, ಪುರಸಭಾ ಸದಸ್ಯ ನಾಗರಾಜು, ಜಿಲ್ಲಾ ಜನಜಾಗೃತಿ ವೇಧಿಕೆ ಸದಸ್ಯ ಕನ್ನಡ ಪ್ರಮೋದ್, ಉದ್ಯಮಿ ಗುಪ್ತ ಸಪ್ತ ನಾರಾಯಣ್, ಕಂಚಮಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್, ನಿಂಗರಾಜು, ದೇವರಾಜು, ಸಿದ್ದಪ್ಪ, ಸೌಭಾಗ್ಯ ಸಿದ್ದರಾಜು, ವಲಯಾಧಿಕಾರಿ ವೀಣಾ, ಹಂಪಾಪುರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸೌಮ್ಯ, ಕಾಶಿ ಮಹೇಶ್, ಸಮಿತಿಯ ಗೌರವಾಧ್ಯಕ್ಷ ಸಿದ್ದರಾಮಪ್ಪ, ಅಧ್ಯಕ್ಷ ಪಿ. ಮಹದೇವಪ್ಪ, ಉಪಾಧ್ಯಕ್ಷ ಮುದ್ರಾಮಪ್ಪ, ಪಿ.ಕೆ.ಶಿವರಾಜು, ವೃಷಭೇಂದ್ರ, ಉಮಾಬಸವರಾಜು, ಹರೀಂದ್ರ ಪ್ರಸಾದ್, ಶಿಲ್ಪಕುಮಾರ್, ರೇಣುಕಾ ಪ್ರಕಾಶ್ ಇದ್ದರು.