ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸುಣ್ಣದಕೇರಿ ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 3,11,820 ರೂ. ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಮಾಹಿತಿ ನೀಡಿದರು.
ಸೋಮವಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘವು ಉತ್ತಮ ಲಾಭಾಂಶ ಪಡೆಯುವ ಮೂಲಕ ಅಭಿವೃದ್ಧಿಯಲ್ಲಿದೆ. ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಿ ಉತ್ತಮ ಲಾಭಾಂಶ ಪಡೆಯಿರಿ ಎಂದು ಉತ್ಪಾದಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮು, ಉಪಾಧ್ಯಕ್ಷ ಬಿ.ಎನ್ ಮಹೇಶ್, ನಿರ್ದೇಶಕರಾದ ಬಿ.ಎಸ್ ರಾಮಲಿಂಗೇಗೌಡ, ಬಿ.ಪಿ ನಟೇಶ್, ಬಿ.ಜಿ ವೆಂಕಟೇಶ್, ಬಿ.ಕೆ ಮಹದೇವ, ಬಿ.ವಿ ರವಿ, ಬಿ.ಎನ್ ಕುಮಾರ, ಎಂ.ಕಾವೇರಿ, ಅಕ್ಕಯ್ಯಮ್ಮ, ಸಣ್ಣನಾರಾಯಣಿ, ತಿಮ್ಮಪ್ಪನಾಯಕ, ಕಾರ್ಯದರ್ಶಿ ಬಿ.ಎಂ ಮಂಜು, ಸಿಬ್ಬಂದಿಗಳಾದ ಅಭಿಲಾಶ್, ಪ್ರಜ್ವಲ್ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.



