Saturday, May 24, 2025
Google search engine

Homeರಾಜ್ಯಬೆಂಗಳೂರು ಹಾಗೂ ಕರ್ನಾಟಕ ಎರಡು ಬಂದ್‌ ಗಳಿಗೂ ನಮ್ಮ ಬೆಂಬಲ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಬೆಂಗಳೂರು ಹಾಗೂ ಕರ್ನಾಟಕ ಎರಡು ಬಂದ್‌ ಗಳಿಗೂ ನಮ್ಮ ಬೆಂಬಲ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ: ಬೆಂಗಳೂರು ಹಾಗೂ ಕರ್ನಾಟಕ ಎರಡು ಬಂದ್‌ ಗಳಿಗೂ ನಮ್ಮ ಬೆಂಬಲವಿದೆ ಎಂದು ಮಂಡ್ಯದಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ನಾಳೆಯ ಪ್ರಾಧಿಕಾರದ ಸಭೆಯ ನಿರ್ಧಾರ ತುಂಬಾ ಮುಖ್ಯವಾಗಿದೆ. ಸರ್ಕಾರ ನೀರು ಬಿಡಲ್ಲ ಎಂಬ ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ. ಸಭೆಯಲ್ಲಿ ಡ್ಯಾಂ‌ನಲ್ಲಿ ನೀರಿಲ್ಲ, ನೀರು ಬಿಡಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಲಿ. ಬೆಂಗಳೂರು, ಕರ್ನಾಟಕ ಸೇರಿದಂತೆ ಎಲ್ಲಾ ಬಂದ್‌ ಗಳಿಗೂ ನಮ್ಮ ಬೆಂಬಲವಿದೆ. ಇದು ಗಂಭೀರವಾದ ವಿಚಾರ, ಯಾರು ಬಂದ್ ಮಾಡಿದ್ರು ನಾವು ಕೈ ಜೋಡಿಸುತ್ತೇವೆ ಎಂದು ಹೇಳಿದರು.

ನೀರು ಕೊಡೋಕೆ ಆಗಲ್ಲ ಬಂದು ನೋಡಿ. ಕುಡಿಯುವ ನೀರು ಕೇಳ್ತಾ ಇರೋದು. ಬಂದು ನೀವೇ, ನಿಮಗೆ ತೋರಿಸುತ್ತೇವೆ ಎಂದು ಸರ್ಕಾರ ಹೇಳಬೇಕು. ನಮ್ಮು ಹೋರಾಟ ಮುಂದುವರೆಯುತ್ತದೆ. ನಾಳೆಯ ಸಭೆಯ ನಿರ್ಧಾರದ ಬಳಿಕ ಮತ್ತಷ್ಟು ಹೋರಾಟದ ರೂಪುರೇಷೆ ನಡೆಯುತ್ತೆ ಎಂದರು.

ನಟ ದರ್ಶನ್ ಅವರು ಕಾವೇರಿ ವಿಚಾರಕ್ಕೆ ಬೆಂಬಲ ಕೊಡ್ತಾರೆ

ಕೆಲ ದಿನಗಳ ಹಿಂದೆ ಕರೆ ಮಾಡಿ ಕಾವೇರಿ ಹೋರಾಟಕ್ಕೆ ಸದಾ ಬೆಂಬಲ ಇದೆ ಎಂದು ಹೇಳಿದ್ರು. ದೊಡ್ಡ ಮಟ್ಟದಲ್ಲಿ ಹೋರಾಟ ಆಗಬೇಕು, ನಾನು ಜೊತೆಯಲ್ಲಿ ಇರ್ತಿನಿ ಅಂತಾ ಹೇಳಿದಾರೆ. ನಿನ್ನೆ ಚಿತ್ರರಂಗದ ಕುರಿತು ಹೇಳಿದ್ದಾರೆ, ಅದರ ಬಗ್ಗೆ ನಾನು ಏನು ಹೇಳಲ್ಲ ಎಂದರು.

ಕಾವೇರಿಗಾಗಿ ಮತ್ತೊಂದು ಕೇಸ್ ಗೆ ಚಿಂತನೆ.!

ನಾಳೆನ ತೀರ್ಪಿನ ಬಳಿಕ ಕಾವೇರಿ ಸಮಸ್ಯೆಗೆ ಹೊಸ ಕೇಸ್ ಹಾಕಲು ನಿರ್ಧರಿಸಿರುವುದಾಗಿ ತಿಳಿಸಿದರು.

ಸತತವಾಗಿ ಕಾವೇರಿ ಹೋರಾಟ ಮಾಡ್ತಿದ್ದೇವೆ, ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳಬೇಕು. ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ ಇದೆ ತಮಿಳುನಾಡಿಗೆ ನೀರು ಬಿಡಕ್ಕಾಗಲ್ಲ ಅನ್ನುವ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ದಿನೇ ದಿನೇ ಕಾವೇರಿ ಹೋರಾಟ ಹೆಚ್ಚಾಗ್ತಿದೆ. ಇಷ್ಟು ದಿನ ಮಾತನಾಡಿದ್ದೇವೆ ಇನ್ನಮೇಲೆ ಆ್ಯಕ್ಷನ್ ತೆಗೆದುಕೊಳ್ಳಲು ಒತ್ತಾಯ ಮಾಡ್ತೇವೆ ಎಂದರು.

ನಾವು ಕೋರ್ಟ್ ಮೊರೆ ಹೋಗಿದ್ವಿ. ಅವತ್ತು ಕೇಸ್ ನಲ್ಲಿ 10 ಸಾವಿರ ಕ್ಯೂಸೆಕ್ ಕೇಳಿದ್ರು. ನಾವು ಕೊಡಕ್ಕಾಗಲ್ಲ 5 ಸಾವಿರ ಕ್ಯೂಸೆಕ್ ಮಾತ್ರ ಕೊಟ್ಟಿದ್ರು. ನಮ್ಮ ಸಮಸ್ಯೆಗೆ ನಾವೇ ಹೊಸ ಕೇಸ್ ಹಾಕಬೇಕು.  ನಾವು ಇಷ್ಟು ದಿನ ಅವರು ಹಾಕಿದ್ದ ಕೇಸ್ ಗೆ ಡಿಫೆಂಡ್ ಮಾಡ್ತಿದ್ವಿ. ನಾವು 5 ಸಾವಿರ ಕ್ಯೂಸೆಕ್ ನೀರು ಕೊಡಕ್ಕಾಗಲ್ಲ ಅಂತ ಕೇಸ್ ಹಾಕಬೇಕು. ನಾಳೆನ ತೀರ್ಪಿನ ಬಳಿಕ ಹೊಸ ಕೇಸ್ ಹಾಕಲು ಮುಂದಾಗುತ್ತೇವೆ ಎಂದು ಹೇಳಿದರು.

ಚರ್ಚೆ ನಡೆಯುತ್ತಿದೆ ಕಾನೂನಾತ್ಮಕ ಹೋರಾಟ ನಡೆಯುತ್ತೆ. ನೀರು ಕೊಡಕ್ಕಾಗಲ್ಲ ಅಂತ ನಿರ್ಧಾರ ತೆಗೆದುಕೊಳ್ಳಬೇಕು. ತುಂಗಭದ್ರಾ ಕಿತ್ತುಕೊಂಡಿದ್ದಾರೆ. ಕೆ.ಆರ್.ಎಸ್ ಕೀ ಕೊಟ್ಟರೆ ಅಷ್ಟೆ. ದೊಡ್ಡ ಮಟ್ಟದಲ್ಲಿ ನಾವು ಹೋರಾಟ ಮಾಡ್ತೇವೆ. ಬೆಂಗಳೂರಿನ ಬಂದ್ ಗೆ ನಾವು ಸಂಪೂರ್ಣ ಬೆಂಬಲ ಕೊಡ್ತೇವೆ. ಪಕ್ಷತೀತವಾಗಿ ನಾವು ಹೋರಾಟಕ್ಕೆ ಸಿದ್ದ. ಕಾವೇರಿ ದೊಡ್ಡ ಮಟ್ಟದ ಸಮಸ್ಯೆ ಎಲ್ಲರು ರೈತರ ನಿಲ್ಲಬೇಕು. ನಾಳೆ ರಾಜ್ಯ ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳಬೇಕು. ಪ್ರಾಧಿಕಾರಕ್ಕೆ ಸಮಸ್ಯೆ ಬಗ್ಗೆ ತೋರಿಸಬೇಕು ಎಂದರು.

ಕಾವೇರಿ ಹೋರಾಟಕ್ಕೆ ಹಿರಿಯ ನಟಿ ಲೀಲಾವತಿ ಬೆಂಬಲ.

ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆಹಿರಿಯ ನಟಿ ಲೀಲಾವತಿ ಆಗಮಿಸಿ ಬೆಂಬಲ ಸೂಚಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಧರಣಿಗೆ ನಟಿ ಲೀಲಾವತಿ, ಪುತ್ರ ವಿನೋದ್ ರಾಜ್ ಸಾಥ್ ನೀಡಿದ್ದಾರೆ.

ನಟ ದರ್ಶನ್ ವಿರುದ್ಧ ಭುಗಿಲೆದ್ದ ಆಕ್ರೋಶ.

ನಟ ದರ್ಶನ್ ಅವರ ಕಾವೇರಿ ವಿಚಾರವಾಗಿ ಬೇಜವಾಬ್ದಾರಿತನದ ಹೇಳಿಕೆಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿಯಲ್ಲಿ ದರ್ಶನ್ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.

ನಟ ದರ್ಶನ್ ಅವರು ಕೂಡಲೇ ರೈತರ ಕ್ಷಮೆ ಕೇಳಬೇಕು. ನಾವು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ದರ್ಶನ್ ಬಂದ್ರೆ ಬಲಸಿಕ್ಕತೆ ಆಗುತ್ತೆ ಎಂದು ಭಾವಿಸಿದ್ದವು. ಅದಕ್ಕಾಗಿಯೇ ನಾವು ನಿಮ್ಮನ್ನ ಹೋರಾಟಕ್ಕೆ ಆಹ್ವಾನ ನೀಡಿದ್ದೆವು. ಕಾವೇರಿ ಕೊಳ್ಳದ ಜಿಲ್ಲೆಯವರಾಗಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಬಾರದು. ಜವಾಬ್ದಾರಿಯುತ ನಟನಾಗಿ ಹೋರಾಟಕ್ಕೆ ದನಿಗೂಡಿಸಿ ಎಂದು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular