Thursday, May 22, 2025
Google search engine

Homeಸ್ಥಳೀಯದಸರಾ ಗಜಪಡೆಯ ತೂಕ ಪರೀಕ್ಷೆ: ಯಾವ ಆನೆ? ಎಷ್ಟು ಭಾರ?

ದಸರಾ ಗಜಪಡೆಯ ತೂಕ ಪರೀಕ್ಷೆ: ಯಾವ ಆನೆ? ಎಷ್ಟು ಭಾರ?

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನ ಅತಿ ಹೆಚ್ಚು ತೂಕದ ಆನೆ ಎಂಬ ಹೆಸರನ್ನು ಈ ಬಾರಿಯೂ ಉಳಿಸಿಕೊಂಡಿದ್ದಾನೆ.

ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇಂದು ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು.

ಒಟ್ಟು 14 ಆನೆಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಆಗಮಿಸಿ ತೂಕ ಪರೀಕ್ಷೆಯಲ್ಲಿ ಭಾಗಿಯಾದವು. ಎರಡನೇ ಹಂತದ ಆನೆಗಳ ಜೊತೆ ಮೊದಲನೇ ಹಂತದ ಆನೆಗಳಿಗೂ ತೂಕ ಪರೀಕ್ಷೆ ಮಾಡಲಾಗಿದೆ.

ಸೆ. 6ರಂದು ಮೊದಲನೇ ಹಂತದ ಆನೆಗಳಿಗೆ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಅಭಿಮನ್ಯು 5160 ರಿಂದ 5300ಕೆಜಿಗೆ ತೂಕ ಏರಿಸಿಕೊಂಡಿದ್ದಾನೆ. ಭೀಮ 4370 ರಿಂದ 4685, ಮಹೇಂದ್ರ 4530 ರಿಂದ 4665, ಧನಂಜಯ 4940 ರಿಂದ 4990, ಗೋಪಿ 5080 ರಿಂದ 5145, ಕಂಜಾನ್​ 4240 ರಿಂದ 4395, ವಿಜಯಾ 2830 ರಿಂದ 2885 ಮತ್ತು ವರಲಕ್ಷ್ಮಿ 3020 ರಿಂದ 3170 ಕೆಜಿಗೆ ತೂಕ ಹೆಚ್ಚಿಸಿಕೊಂಡಿವೆ.

5685 ಕೆಜಿಯೊಂದಿಗೆ ಈ ಬಾರಿಯೂ ಅರ್ಜನನೇ ಮೊದಲ ಸ್ಥಾನದಲ್ಲಿದ್ದಾನೆ. 5300 ಕೆಜಿ ತೂಕದೊಂದಿಗೆ ಅಂಬಾರಿ ಹೊರುವ ಅಭಿಮನ್ಯು ಎರಡನೇ ಸ್ಥಾನದಲ್ಲಿದ್ದಾನೆ. ತೂಕ ಹೆಚ್ಚಿಸಿಕೊಳ್ಳವ ವಿಚಾರದಲ್ಲಿ ಭೀಮ ಎಲ್ಲರಿಗಿಂತ ಮುಂದಿದ್ದಾನೆ. ಭೀಮ ಬರೋಬ್ಬರಿ 315 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.

ದಸರಾ ಗಜಪಡೆಯ ತೂಕದ ವಿವರ

1. ಅಭಿಮನ್ಯು – 5,300

2. ವಿಜಯ – 2,885

3. ಭೀಮ – 4,685

4. ವರಲಕ್ಷ್ಮಿ – 3,170

5. ಮಹೇಂದ್ರ – 4660

6. ಧನಂಜಯ – 4,990

7. ಕಂಜನ್ – 4,395

8. ಗೋಪಿ – 5145

9. ಹಿರಣ್ಯ – 2915

10. ರೋಹಿತ್ – 3360

11. ಸುಗ್ರೀವ – 5035

12. ಪ್ರಶಾಂತ್ – 4970

13. ಲಕ್ಷ್ಮಿ – 3235

14. ಅರ್ಜುನ – 5680

RELATED ARTICLES
- Advertisment -
Google search engine

Most Popular