ಮಂಡ್ಯ: ವಿಜಯ ಸೇನೆ ನೇತೃತ್ವದಲ್ಲಿ ಬರದನಾಡು ಚಿತ್ರದುರ್ಗದಿಂದ ನೀರು ತಂದು ಮಂಡ್ಯದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಗಿದೆ
ಚಿತ್ರದುರ್ಗದಿಂದ ತಂದಿದ್ದ ಬಿಸ್ಲೇರಿ ನೀರು ಹಾಗೂ ಟಿಶ್ಯು ಪೇಪರ್ ಅನ್ನು ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ನೀರು ಹಾಗೂ ಟಿಶು ಪೇಪರ್ ನೀಡಿ, ಅದನ್ನು ಮುಖ್ಯಮಂತ್ರಿಗೆ ರವಾನಿಸುವಂತೆ ಡಿಸಿಗೆ ಮನವಿ ಮಾಡಲಾಗಿದೆ.
ವಿಜಯ ಸೇನೆ ಕಾರ್ಯಕರ್ತರು ಚಿತ್ರದುರ್ಗದಿಂದ ಕಾವೇರಿ ಹೋರಾಟಕ್ಕೆ ಆಗಮಿಸಿದ್ದು, ನಿರಂತರವಾಗಿ ನೀರು ಬಿಡುತ್ತಿದ್ರೆ ಮಂಡ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಮುಂದೆ ಟಿಶು ಪೇಪರ್ ಬಳಸುವ ದುಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ರಾಜ್ಯ ಎಲ್ಲಾ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.