Wednesday, May 21, 2025
Google search engine

Homeರಾಜ್ಯಸುದ್ದಿಜಾಲನೂತನ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ನೂತನ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ರಾಮನಗರ: ಟಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಕಂಪನಿಯ ಸಿಎಸ್‌ಆರ್ ನಿಧಿಯಡಿ ಬಿಡದಿ ಪುರಸಭೆಯ ೧೧ನೇ ವಾರ್ಡ್ ವ್ಯಾಪ್ತಿಯ ಪುರಸಭೆ ಮುಖ್ಯ ರಸ್ತೆಯ ಬಾಲಪ್ಪ ಬಡಾವಣೆ ಬಳಿ ಹಾಗೂ ವಾರ್ಡ್ ನಂ. ೨೨ರ ತಿಮ್ಮೇಗೌಡನ ದೊಡ್ಡಿಯಲ್ಲಿ ನೂತನವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು.

ಬಿಡದಿ ಪುರಸಭೆಯ ೧೧ನೇ ವಾರ್ಡ್ ವ್ಯಾಪ್ತಿಯ ಪುರಸಭೆ ಮುಖ್ಯ ರಸ್ತೆಯ ಬಾಲಪ್ಪ ಬಡಾವಣೆ ಬಳಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಚ್.ಸಿ. ಬಾಲಕೃಷ್ಣ ಅವರು ಹಾಗೂ ವಾರ್ಡ್ ನಂ. ೨೨ರ ತಿಮ್ಮೇಗೌಡನ ದೊಡ್ಡಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ ಅವರು ಉದ್ಘಾಟಿಸಿದರು. ಶುದ್ಧ ಕುಡಿಯುವ ನೀರಿನ ಘಟಕವು ಗಂಟೆಗೆ ೧ ಸಾವಿರ ಲೀಟರ್ ಸಾಮಥ್ಯವನ್ನು ಹೊಂದಿದ್ದು, ಹತ್ತಿರದ ಪ್ರದೇಶಗಳಲ್ಲಿ ದಿನಕ್ಕೆ ೪೦೦ ರಿಂದ ೫೦೦ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸುತ್ತದೆ.
ಟಯೋಟಾ ಆಟೋ ಪಾರ್ಟ್ಸ್ ಕಂಪನಿಯ ಉಪಾಧ್ಯಕ್ಷರಾದ ತಬ್ರೇಜ್ ಅಹಮ್ಮದ್, ಜನರಲ್ ಮ್ಯಾನೇಜರ್ ನಾಗರಾಜು, ಸಿಎಸ್‌ಆರ್ ವ್ಯವಸ್ಥಾಪಕರಾದ ರೋಹಿತ್ ಸ್ವಾಮಿ ಸೇರಿದಂತೆ ಟಯೋಟಾ ಆಟೋ ಪಾರ್ಟ್ಸ್ ಕಂಪನಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular