ಬೆಂಗಳೂರು: ದಸರಾ ಹಬ್ಬ ಹಿನ್ನೆಲೆ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಆರ್‌ಟಿಒ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಟೋಲ್ ಮೇಲೆ ಆರ್‌ಟಿಒ ಅಧಿಕಾರಿಗಳು ದಾಳಿ ನಡೆಸಿ ಖಾಸಗಿ ಬಸ್‌ಗಳ ಪರಿಶೀಲನೆ ನಡೆಸಿ ಚಾಲಕ, ನಿರ್ವಾಹಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳ ಪರಿಶೀಲನೆ ಮಾಡಲಾಗಿದ್ದು ಲಗೇಜ್ ಕ್ಯಾರಿಯರ್‌ನಲ್ಲೂ ಜನರು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಬಸ್‌ನ ಕೆಳ ಭಾಗದ ಲಗೇಜ್ ಇಡುವ ಜಾಗದಲ್ಲಿ ಬೆಡ್ ಹಾಕಿ ಜನ ಮಲಗಿಕೊಂಡು ಪ್ರಯಾಣಿಸುತ್ತಿದ್ದಾರೆ. ಗಾಳಿಯಾಡದ ಲಗೇಜ್ ಕ್ಯಾರಿಯರ್‌ನಲ್ಲಿ ಮಲಗಿ ಪ್ರಯಾಣಿಸುತ್ತಿದ್ದ ಮೂವರನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ. ಲಗೇಜ್ ಕ್ಯಾರಿಯರ್‌ನಲ್ಲಿದ್ದವರನ್ನು ಕೆಳಗಿಳಿಸಿ ಆರ್‌ಟಿಒ ಅಧಿಕಾರಿಗಳು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಖಾಸಗಿ ಬಸ್ ಸಿಬ್ಬಂದಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಖಾಸಗಿ ಬಸ್‌ಗಳಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದ್ದಾರೆ.
೫ ರಿಂದ ೧೦% ರಿಯಾಯಿತಿಯನ್ನೂ ಕೊಟ್ಟಿದೆ. ಆದರೂ ಖಾಸಗಿ ಸಾರಿಗೆಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ. ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ ನಿಗದಿಮಾಡಲಾಗಿದೆ. ಎಸಿ ವೋಲ್ವೋ ಮಲ್ಟಿ ಆಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಅ. ೧೬ರಂದು ಟಿಕೆಟ್ ದರ ೬೨೦ರೂ. ರಿಂದ ೮೫೦ ರೂ. ಇತ್ತು. ಆದರೆ ಅ.೨೦ರಂದು ೧೮೦೦-೨೧೦೦ ರೂ. ಏರಿಕೆಯಾಗಿದೆ. ಬೆಂಗಳೂರು- ಹೈದರಾಬಾದ್ ಟಿಕೆಟ್ ದರ ಅ.೧೭ಕ್ಕೆ ೧೩೦೦ರಿಂದ ೧೯೦೦ ಇದೆ. ಅ.೨೦ ದರ ೨೮೦೦-೩೩೦೦ ಆಗಿದೆ. ಬೆಂಗಳೂರು-ಕೊಯಮತ್ತೂರಿಗೆ ಈ ಹಿಂದೆ ಟಿಕೆಟ್ ದರ ೭೦೦ ರಿಂದ ೧೧೦೦ ಇತ್ತು. ಆದರೆ ಅ. ೨೦ ದರ ೨೩೦೦-೨೮೦೦ಕ್ಕೆ ಏರಿದೆ. ಬೆಂಗಳೂರು ಮುಂಬೈ ಟಿಕೆಟ್ ದರ ೧೩೦೦-೧೬೦೦ ದಿಂದ ೨೩೦೦-೨೭೦೦ ಆಗಿದೆ. ಅಲ್ಲದೆ ಬೆಂಗಳೂರಿಂದ ಗೋವಾಗೆ ಟಿಕೆಟ್ ದರ ೧೦೦೦ ದಿಂದ ೧೩೦೦ ಇತ್ತು. ಅಕ್ಟೋಬರ್ ೨೦ ದರ ೨೮೦೦-೩೧೦೦ಕ್ಕೆ ಏರಿದೆ ಹೀಗಾಗಿ ಪ್ರಯಾಣಿಕರು ಬೆಲೆ ಏರಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.