Thursday, May 22, 2025
Google search engine

Homeರಾಜ್ಯಮಂಗಳೂರು: ರೈಲಿನಿಂದ ಆಯತಪ್ಪಿ ಬಿದ್ದು ಯುವಕ ಸಾವು

ಮಂಗಳೂರು: ರೈಲಿನಿಂದ ಆಯತಪ್ಪಿ ಬಿದ್ದು ಯುವಕ ಸಾವು

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಯುವಕನೊಬ್ಬ ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಇಂದು ಕೇರಳದ‌ ಕಣ್ಣೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಸುರೇಶ ಎಂದು ಗುರುತಿಸಲಾಗಿದೆ.

ಕೇರಳದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದ ಇವರು ಚೌತಿ ಹಬ್ಬದ ಹಿನ್ನೆಲೆಯಲ್ಲಿ ವಾರದ ಹಿಂದಷ್ಟೇ ಮನೆಗೆ ಬಂದು ಮತ್ತೆ ಕೆಲಸಕ್ಕೆಂದು ತೆರಳಿದ್ದರು.

ಗುರುವಾರ ರಾತ್ರಿ ಕರೆ ಮಾಡಿ ರೈಲಿನಲ್ಲಿ ಊರಿಗೆ ಬರುತ್ತಿರುವುದಾಗಿ ತಿಳಿಸಿದ್ದು, ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಅವರ ಮೊಬೈಲ್ ನಂಬರ್ ಗೆ ಮನೆಯಿಂದ ಕರೆ ಮಾಡಿದ ವೇಳೆ ಆಸ್ಪತ್ರೆಯ ಸಿಬ್ಬಂದಿ ಕರೆ ಸ್ವೀಕರಿಸಿ ಮೃತಪಟ್ಟ ವಿಚಾರವನ್ನು ತಿಳಿಸಿರುವುದಾಗಿ ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular