ಮೈಸೂರು: ಬಿ ಜಿ ಎಸ್ ಬಿ.ಎಡ್ ಕಾಲೇಜ್, ಮೈಸೂರು ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಡಿ. ಆನಂದ್ ನಿರ್ದೇಶಕರು, ಕಾಲೇಜು ಅಭಿವೃದ್ಧಿ ಮಂಡಳಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕೆ.ಎನ್. ಮಂಜುನಾಥ್ ಉಪಕುಲ ಸಚಿವರು ಪರೀಕ್ಷಾಂಗ ಮೈಸೂರು ವಿಶ್ವವಿದ್ಯಾನಿಲಯ ಮುಖ್ಯ ಅತಿಥಿಗಳಾಗಿ ಮತ್ತು ಕಾಲೇಜಿನ ಆಡಳಿತ ಅಧಿಕಾರಿಗಳಾದ ಶ್ರೀಮತಿ ಹೆಚ್ .ಯಶೋಧ ಪ್ರಾಂಶುಪಾಲರಾದ ಡಾ. ನಾಗರಾಜು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿದ್ದ ಡಿ ಆನಂದ್ ” ಶಿಕ್ಷಣ ಹಾಗೂ ಶಿಕ್ಷಕರ ಮಹತ್ವದ ಜೊತೆ ಅಧ್ಯಾಪಕ ವೃತ್ತಿಯ ಆಯ್ಕೆಯ ನಂತರ ವೃತ್ತಿ ಮೇಲಿನ ಒಲವು, ಗೌರವ ಇರಲಿ..ಅಲ್ಲದೆ ಅಧ್ಯಾಪಕರ ಪ್ರಭಾವ ಎಂತಹದು ಹಾಗೂ ಶಿಕ್ಷಕರ ನಡತೆಯೇ ವಿದ್ಯಾರ್ಥಿಗಳಿಗೆ ಸ್ಫೂರ್ತಿ, ಪ್ರೇರಣೆ ಜೊತೆಗೆ ಅವರ ಅನುಕರಣೆಯು ಹೌದು, ಸ್ವಪ್ರಜ್ಞೆ, ಸ್ಥಿತಪ್ರಜ್ಞೆ ಶಿಕ್ಷಕರಾದವರಲ್ಲಿ ಇರಲಿ ” ಎಂಬ ಸಲಹೆಯನ್ನು ನೀಡಿದರು.ಹಾಗೆಯೇ K N ಮಂಜುನಾಥ್ ” ಶಿಕ್ಷಕರ ಜವಾಬ್ದಾರಿ, ಶಿಕ್ಷಕರ ಮಾತಿನ ಬೆಲೆ ಕುರಿತು ‘ ಬೆಳೆಯುವ ಸಿರಿ ಮೊಳಕೆಯಲ್ಲಿ ‘ ‘ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ‘ ಎಂಬ ಗಾದೆಗಳ ಮೂಲಕ ಶಿಕ್ಷಕನು ವಿದ್ಯಾರ್ಥಿಗಳನ್ನು ತಿದ್ದುವ ಪರಿಯನ್ನು ಹಾಗೂ ಉತ್ತಮ ಶಿಕ್ಷಕ ತಜ್ಞ ಹೇಗಿರಬೇಕು ಎನ್ನುವಂತಹ ವಿಚಾರಗಳ ಕುರಿತು ನಮ್ಮ ಅಭಿಪ್ರಾಯಗಳನ್ನು ಸೂಚಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗರಾಜು ರವರು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದಿಸಿ ಬೀಳ್ಕೊಡುಗೆ ನೀಡಿದರು.
