ಹೊಸೂರು: ಪ್ರಸ್ತುತ ಸಮಾಜವು ಸುಸಂಸ್ಕೃತವಾಗಿರಬೇಕಾದರೇ ಶಿಕ್ಷಕರ ನೀಡುವ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು, ಶಿಕ್ಷಕರು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಮಠದ ಶ್ರೀ ಸೋಮೇಶ್ವರನಾಥ ಸ್ವಾಮಿಜಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್’ನಲ್ಲಿ ಮೈಸೂರಿನ ಬಿಜಿಎಸ್ ಬಿಇಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಮುದಾಯ ಜೀವನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಮಾತನಾಡಿ, ಶಿಕ್ಷಕರ ತಯಾರು ಮಾಡಲು ಸರ್ಕಾರ ಮತ್ತು ಪೋಷಕ ವರ್ಗದವರು ಸಾಕಷ್ಟು ಹಣವನ್ನು ವ್ಯಯ ಮಾಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಕರಾಗಿ ಎಂದರು.
ಬಾವಿ ಶಿಕ್ಷಕರಾಗಿರುವ ನೀವುಗಳು ವೃತ್ತಿಯಲ್ಲಿನ ಗೌರವ,ಘನತೆ,ಶಿಸ್ತು, ಮಹತ್ವವನ್ನು ಮನ್ನಣೆ ನೀಡಿದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಅಲ್ಲದೇ ಸಮಾಜದ ವ್ಯವಸ್ಥೆ ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಗರ ಪ್ರದೇಶದಲ್ಲಿ ವ್ಯಾಸಂಗ ಮಾಡುವರಿಗೆ ಗ್ರಾಮಾಂತರ ಪ್ರದೇಶಲ್ಲಿನ ಸಮಸ್ಯೆಗಳ ಆರಿವು ತಿಳಿಯುವುದಿಲ್ಲ ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸುವ ಈ ಶಿಬಿರಗಳಲ್ಲಿ ಭಾಗವಹಿಸಿ ಆ ಪ್ರದೇಶದ ಜನರ, ನೋವು ನಲಿವುಗಳ ಕುರಿತು ಚಿಂತನೆ ನಡೆಸಿದಾಗ ಏಕಾಗ್ರತೆ ಜತೆಗೆ ಜಾಗೃತಿ ಮೂಡಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪಿರಿಯಾಪಟ್ಟಣ ತಾಲೂಕು ಪಿ.ಎಂ.ಪೋಷಣಾ ಅಭಿಯಾನದ ಸಹಾಯಕ ನಿರ್ದೇಶಕ ಎನ್.ಸಿ ಪ್ರಶಾಂತ್ ಮಾತನಾಡಿ, ಸಮಾಜವನ್ನು ವ್ಯವಸ್ಥೆಯನ್ನು ನಿರ್ಧರಿಸುವ ಜವಬ್ದಾರಿ ಶಿಕ್ಷಕರ ಮೇಲಿದ್ದು, ಇದಕ್ಕಾಗಿ ಶಿಕ್ಷಕರ ವೃತ್ತಿಗೆ ಬರುವರು ವೃತ್ತಿ ಗೌರವ ಮತ್ತು ಘನತೆಯನ್ನು ಉಳಿಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಶಿಬಿರದ ಅಂಗ ರೋಹಿತ್ ಮತ್ತು ಐಶ್ವರ್ಯ ತಂಡದವರು ಜನಪದ ಸಾಹಿತ್ಯದ ಹಾಡುಗಳಿಗೆ ನೃತ್ಯಮಾಡಿ ರಂಜಿಸಿದರು ಕಾರ್ಯಕ್ರಮದಲ್ಲಿ ಕೆ.ಆರ್.ನಗರ ಅಗ್ನಿಶಾಮಕ ದಳದ ಜಿ.ಲಕ್ಷ್ಮಿಕಾಂತಯಾದವ್ ಅವರ ನೇತೃತ್ವದಲ್ಲಿ ಅಗ್ನಿ ಸುರಕ್ಷತೆ ಕ್ರಮಗಳ ಕುರಿತು ಪ್ರಾತ್ಯಕ್ಷತೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಮೈಸೂರು ಬಿಜಿಎಸ್ ಬಿಇಡಿ ಕಾಲೇಜಿನ ಆಡಳಿತಾಧಿಕಾರಿ ಯಶೋಧ, ಕಾಲೇಜಿನ ಪ್ರಾಂಶುಪಾಲ ನಾಗರಾಜು, ಶಿಬಿರದ ಸಂಚಾಲಕರಾದ ಸಿ.ಆರ್.ಶರತ್ ಕುಮಾರ್, ಡಾ.ಎಚ್.ಬಿ.ಬೆಟ್ಟಸ್ವಾಮಿ, ಪ್ರಾಧ್ಯಪಕರಾದ ಕೆ.ಟಿ. ಬಸವರಾಜು, ಡಿ.ಎನ್.ನಾಗರಾಜು, ಡಾ.ಶರ್ಮಿಷ್ಠ ಚಕ್ರವರ್ತಿ, ಡಾ.ಸುಮತಿ, ದಿನೇಶ್, ಶೋಭ, ರಾಧಿಕ, ನಂಜುಂಡಸ್ವಾಮಿ, ಶಿಬಿರದ ಲೀಡರ್ ಗಳಾದ ಪ್ರಶಾಂತ್, ಶ್ಯಾಮಲಾ ಚುಂಚನಕಟ್ಟೆ ಶಿಕ್ಷಣ ಟ್ರಸ್ಟ್ ನ ಮುಖ್ಯಶಿಕ್ಷಕಿ ಚಾಂದಿನಿ ಶಿಕ್ಷಕರಾದ ಮಹೇಶ್, ಗಿರೀಶ್, ಸತ್ಯನಾರಾಯಣ್, ಧರ್ಮರಾಜ್ ಮಠದ ವ್ಯವಸ್ಥಾಪಕ ರಾಮಲಿಂಗಪ್ಪ ಇದ್ದರು.