ಮಂಡ್ಯ: ಜೆಡಿಎಸ್ ಶಾಸಕ ಎಚ್.ಟಿ.ಮಂಜು ಕೆ.ಆರ್.ಪೇಟೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿ ಕಾಲೇಜುವರೆಗೂ ಕೆಎಸ್ ಆರ್ ಟಿಸಿ ಬಸ್ ಸೌಕರ್ಯ ಕಲ್ಪಿಸಲಾಗಿದೆ.
ಪಟ್ಟಣದ ಬಸ್ ನಿಲ್ದಾಣದಿಂದ ಎರಡು ಕಿ.ಮೀ ದೂರ ಇರುವ ಕಾಲೇಜುವರೆಗೂ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಪಟ್ಟಣದಿಂದ ಎರಡು ಕಿ.ಮೀ. ದೂರದಲ್ಲಿ ಮಹಿಳಾ ಕಾಲೇಜು, ಪ್ರಥಮ ದರ್ಜೆ, ಹಾಗೂ ಸ್ನಾತಕ, ಡಿಪ್ಲೋಮೋ, ಪಿಯು ಕಾಲೇಜು ಇದೆ. ಆದ್ದರಿಂದ ಕೆ.ಆರ್.ಪೇಟೆಯಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜು ವರೆಗು ಬಸ್ ಸಂಚಾರಕ್ಕೆ ಶಾಸಕರಿಂದ ಚಾಲನೆ ನೀಡಲಾಗಿದೆ.
ಬಸ್ ಸೌಕರ್ಯ ಒದಗಿಸಿದ ಶಾಸಕರ ಕೆಲಸಕ್ಕೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮೆಚ್ಚುಗೆ ಸೂಚಿಸಿದ್ದಾರೆ.