ಚಾಮರಾಜನಗರ: ತಾಲೂಕಿನ ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವನಂಜಪ್ಪನವರು ವಹಿಸಿ ಮಾತನಾಡಿ ವಿವಿಧ ಕಾನೂನುಗಳ ಅರಿವು ಹಾಗೂ ಪರಿಹಾರಕ್ಕಾಗಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ನೀಡುವ ಮಾರ್ಗದರ್ಶನ ಹಾಗೂ ಸೇವೆಗಳು ಜನರಿಗೆ ತುಂಬಾ ಅನುಕೂಲವಾಗಿದೆ. ಕಾನೂನಿನ ರೀತಿಯಲ್ಲಿ ಅನೇಕ ಸಮಸ್ಯೆಗಳನ್ನು ಹಾಗೂ ವ್ಯಾಜ್ಯಗಳನ್ನು ಪರಿಹಾರ ಮಾಡಿಕೊಂಡು ನೆಮ್ಮದಿಯಾಗಿ ಬದುಕಲು ಅವಕಾಶವಾಗುತ್ತದೆ ಎಂದರು.
ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಪ್ರತಿಜ್ಞಾವಿಧಿ ಬೋಧಿಸಿ, ಕಾನೂನು ಸೇವೆಗಳ ಪ್ರಾಧಿಕಾರದ ಅನೇಕ ಅಂಶಗಳ ಬಗ್ಗೆ ತಿಳುವಳಿಕೆ ನೀಡುತ್ತಿದೆ.
9 ರಾಷ್ಟ್ರೀಯ ಕಾನೂನು ಸೇವೆಗಳ ದಿನ ಪ್ರತಿಯೊಬ್ಬರು ಕಾನೂನಾತ್ಮಕವಾಗಿ ಜಾಗೃತಿಯನ್ನು ಹಾಗೂ ಜ್ಞಾನವನ್ನು ಪಡೆದು ಪರಿಹರಿಸಿಕೊಳ್ಳಬಹುದು. ಬಾಲ್ಯ ವಿವಾಹ ಹಾಗೂ ಪ್ರೋಕ್ಸೋ ಪ್ರಕರಣಗಳ ಬಗ್ಗೆ ಕಾನೂನು ಪ್ರಜ್ಞೆ ಸರ್ವರಿಗೂ ಸಹಾಯವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರ ಉಚಿತವಾಗಿ ಕಾನೂನು ನೆರವು ನೀಡಿ ಜನಸಾಮಾನ್ಯರಲ್ಲಿ ಆತ್ಮ ವಿಶ್ವಾಸವನ್ನು, ಆತ್ಮಸ್ಥೈರ್ಯವನ್ನು ತುಂಬಲು ಅವಕಾಶ ನೀಡಿದೆ ಎಂದರು. ಹಿರಿಯ ಉಪನ್ಯಾಸಕರಾದ ಮೂರ್ತಿ ಆರ್, ಶ್ರೀಕಂಠ ನಾಯಕ ,ರಮೇಶ್ ,ಸುರೇಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
