Saturday, May 24, 2025
Google search engine

Homeರಾಜ್ಯಸುದ್ದಿಜಾಲಅತಿಸಾರ ಭೇದಿಯಿಂದ ಉಂಟಾಗುವ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಸಹಕರಿಸಿ: ಸೋಮಶೇಖರ್

ಅತಿಸಾರ ಭೇದಿಯಿಂದ ಉಂಟಾಗುವ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಸಹಕರಿಸಿ: ಸೋಮಶೇಖರ್

ರಾಮನಗರ: ಆರೋಗ್ಯ ಇಲಾಖೆವತಿಯಿಂದ ಮಕ್ಕಳನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಜಾಗೃತಿ ಮೂಡಿಸಿ ಜೊತೆಗೆ ಸೇವೆಗಳನ್ನು ನೀಡಲಾಗುತ್ತಿದ್ದು ಸಾರ್ವಜನಿಕರುಇದರ ಪ್ರಯೋಜನ ಪಡೆದುಕೊಳ್ಳಬೇಕೆಂದುನಗರಸಭೆಉಪಾಧ್ಯಕ್ಷರಾದಸೋಮಶೇಖರ್‌ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳಕಚೇರಿ, ವಿವಿಧ ಅಭಿವೃದ್ದಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಮನಗರ ಟೌನಿನ ಕೊಂಕಾಣೆದೊಡ್ಡಿ ಅಂಗನವಾಡಿ ಕೆಂದ್ರದಲ್ಲಿ ಜಿಲ್ಲಾ ಮಟ್ಟದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ-೨೦೨೩, ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಹಾಗೂ ನ್ಯೂಮೋನಿಯವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕಜಾಗೃತಿ ಮತ್ತು ಕ್ರಿಯೆಕುರಿತು ಆಯೋಜಿಸಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಡಾ. ನಿರಂಜನ್‌ಅವರು ಮಾತನಾಡಿ, ಜಿಲ್ಲೆಯಾದ್ಯಂತ ತೀವ್ರ ಅತಿಸಾರ ನಿಯಂತ್ರಣ ಪಾಕ್ಷಿಕವನ್ನು ನವೆಂಬರ್-೧೫ ರಿಂದ ೨೮ ರವರೆಗೆ ಆಚರಿಸಲಾಗುತ್ತಿದ್ದು,ಇದರ ಮುಖ್ಯಉದ್ದೇಶಅತಿಸಾರ ಭೇದಿಯಿಂದ ಅಪೌಷ್ಠಿಕತೆ, ನಿರ್ಜಲೀಕರಣ, ಮತ್ತು ದೀರ್ಘಾವದಿ ಖಾಯಿಲೆಗಳಿಗೆ ಮಕ್ಕಳು ತುತ್ತಾಗುತ್ತಾರೆ.ಅತಿಸಾರದಿಂದ ಮಕ್ಕಳನ್ನು ರಕ್ಷಿಸಲು ಪಾಕ್ಷಿಕದ ಮನೆ ಸಮೀಕ್ಷೆ ವೇಳೆಯಲ್ಲಿ ೫ ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಓ.ಆರ್.ಎಸ್ ಪ್ಯಾಕ್ ನೀಡಲಾಗುವುದು, ಆ ಸಂದರ್ಭದಲ್ಲಿ ಅತಿಸಾರದಿಂದ ಬಳಲುತ್ತಿರುವ ಮಕ್ಕಳಿದ್ದರೆ ಓ.ಆರ್.ಎಸ್. ಜೊತೆಗೆಝಿಂಕ್ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುವುದು.ಸಾರ್ವಜನಿಕರುಇದರ ಪ್ರಯೋಜನ ಪಡೆದು ಕೊಂಡುಅತಿಸಾರ ಭೇದಿಯಿಂದ ಉಂಟಾಗುವ ಸಾವಿನ ಪ್ರಮಾಣವನ್ನು ಶೂನ್ಯಕ್ಕೆತರಲು ಸಹಕರಿಸುವಂತೆ ತಿಳಿಸಿದರು.

ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಡಾ.ರಾಜುಅವರುಪ್ರಾಸ್ಥವಿಕವಾಗಿ ಮಾತನಾಡಿತೀವ್ರಅತಿಸಾರ ನಿಯಂತ್ರಣ ಕಾರ್ಯಕ್ರಮದ ಜೊತೆಯಲ್ಲಿ ರಾಷ್ಟ್ರೀಯ ನವಜಾತ ಶಿಶು ಸಪ್ತಾಹವನ್ನು ನವೆಂಬರ್-೧೫ ರಿಂದ ೨೧ ರವರೆಗೆಆಚರಿಸಲಾಗುತಿದ್ದುಇದರ ಮುಖ್ಯಉದ್ದೇಶ ನವಜಾತ ಶಿಶುವಿನ ಅವಧಿಯು ಮಕ್ಕಳ ಜೀವನದಲ್ಲಿಅತ್ಯಂತ ನಿರ್ಣಾಯಕಅವಧಿಯಾಗಿದೆ. ಆದ್ದರಿಂದ ಸಪ್ತಾಹದ ಸಂದರ್ಭದಲ್ಲಿ ನವಜಾತ ಶಿಶುಗಳ ಅನುಸರಣೆ ಮತ್ತು ಮನೆ ಬೇಟಿಗಳನ್ನು ನಡೆಸುವುದರಜೊತೆಗೆದುರ್ಬಲ ನವಜಾತ ಶಿಶುಗಳಾದ ಅವಧಿ ಪೂರ್ವಜನನ, ಕಡಿಮೆತೂಕ, ಅನಾರೋಗ್ಯದಿಂದ ಬಳಲುತ್ತಿರುವ ನವಜಾತ ಶಿಶುಗಳ ಪಟ್ಟಿಮಾಡಿಅಗತ್ಯ ಸೇವೆಗಳನ್ನು ಉಚಿತವಾಗಿ ನೀಡಲಾಗುವುದುಜೊತೆಗೆಎದೆಹಾಲಿನ ಮಹತ್ವ, ಮಗುವಿನ ಆರೈಕೆ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದುತಾಯಂದಿರು ಹಾಗೂ ಪೋಷಕರು ಸಹಕರಿಸುವ ಮೂಲಕ ನವಜಾತ ಶಿಶುಗಳನ್ನು ಸಂರಕ್ಷಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಸನ್ನ, ಡಿ.ಟಿ.ಒಡಾ.ಕುಮಾರ್, ಸಿ.ಡಿ.ಪಿ.ಒ ಸುರೇಂದ್ರ, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಮೇಲ್ವಿಚಾರಕಿ ಶಿವಮ್ಮ, ಕ್ಷೇತ್ರಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ, ಹಿರಿಯ ಪ್ರಾಥಮಿಕಆರೋಗ್ಯ ಸುರಕ್ಷತಾಧಿಕಾರಿಗಳಾದ ಸುಮಂಗಲ, ಉಮಾದೇವಿ, ಬಿಳಗಮ್ಮ, ಆರೋಗ್ಯ ಸಿಬ್ಬಂದಿ, ಆಶಾ-ಅಂಗನವಾಡಿಕಾರ್ಯಕರ್ತೆಯರು, ತಾಯಂದಿರು, ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular