ಹೆಚ್ ಡಿ ಕೋಟೆ: ಮಗನ ಸಾವಿನ ಆಘಾತ ತಾಳಲಾರದೆ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಹೆಚ್ ಡಿ ಕೋಟೆಯ ಹನುಮಂತ ನಗರದಲ್ಲಿ ನಡೆದಿದೆ. ಮಗ ಚಂದ್ರು (೪೫) ತಾಯಿ ದೇವಮ್ಮ (೬೫) ಮೃತ ದುರ್ದೈವಿಗಳು. ಹೃದಯಾಘಾತದಿಂದ ಚಂದ್ರು ಸಾವನ್ನಪ್ಪಿದ್ದರು.
ಅಂತ್ಯಕ್ರಿಯೆ ನೆರವೇರಿಸಿ ತಾಯಿ ದೇವಮ್ನ ಮನೆಗೆ ಬಂದಿದ್ದರು. ಮರುದಿನ ದೇವಮ್ಮ ಸಹಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಅಂತ್ಯಕ್ರಿಯೆ ನೆರವೇರಿಸಿದ ಸ್ಥಳದಲ್ಲೇ ತಾಯಿ ಅಂತ್ಯಕ್ರಿಯೆ ನಡೆದಿದೆ. ಮನಕಲಕುವ ಘಟನೆಗೆ ಹೆಚ್.ಡಿ.ಕೋಟೆ ಸಾಕ್ಷಿಯಾಗಿದೆ.