Friday, May 23, 2025
Google search engine

Homeಸ್ಥಳೀಯಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿಯ ಗುರುತು ಪತ್ತೆಗೆ ಮನವಿ

ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿಯ ಗುರುತು ಪತ್ತೆಗೆ ಮನವಿ

ಮೈಸೂರು: ಮೆಲ್ಲಹಳ್ಳಿ ಗ್ರಾಮದ ಮೈಸೂರು- ಬನ್ನೂರು ರಸ್ತೆಯಲ್ಲಿರುವ ಪೌಲ್ಟ್ರಿ ಫಾರಂ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ 45-50 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಅಪಘಾತಕ್ಕೀಡಾದ ವ್ಯಕ್ತಿಯ ಬಲಕಾಲು, ಮೈಕೈಗೆ ತೀವ್ರವಾಗಿ ಗಾಯವಾಗಿದ್ದು, ಪ್ರಜ್ಞೆ ಇರುವುದಿಲ್ಲ.  ಈ ವ್ಯಕ್ತಿಯ ಬಗ್ಗೆ ಅಕ್ಕಪಕ್ಕದ ಗ್ರಾಮಗಳಲ್ಲಿ ವಿಚಾರಿಸಿದ್ದು, ಈತನ ಮಾಹಿತಿ ಲಭ್ಯವಾಗದ ಕಾರಣ ಚೇತನ್ ಕುಮಾರ್ ಎಂಬುವವರು ವರುಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಾಯಾಳುವಿನ ಚಹರೆ: ಕುರುಚಲು ಗಡ್ಡ, ಮೀಸೆ ಬಿಟ್ಟಿದ್ದು, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕೆಂಪು ಬಣ್ಣಧ ಟಿ-ಶರ್ಟ್ ಮೆರೂನ್ ಕಲರ್ ಚಡ್ಡಿ ಧರಿಸಿರುತ್ತಾರೆ. ಪ್ರಸ್ತುತ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಎಸ್ ಪಿ ಕಚೇರಿ ದೂ. 0821-2520040, ಮೈಸೂರು ಜಿಲ್ಲಾ ಕಂಟ್ರೋಲ್ ರೂಂ ದೂ.2444900 ಅಥವಾ ವರುಣ ಪೊಲೀಸ್ ಠಾಣೆ ದೂ. 2594411, 9480805052ನ್ನು ಸಂಪರ್ಕಿಸಲು ಕೋರಲಾಗಿದೆ.

RELATED ARTICLES
- Advertisment -
Google search engine

Most Popular