Saturday, May 24, 2025
Google search engine

HomeUncategorizedರಾಷ್ಟ್ರೀಯರಾಜಸ್ಥಾನ: ಮಗಳು ಕತ್ತು ಸೀಳಿ ಕೊಲೆ ಮಾಡಿ, ದೇಹಕ್ಕೆ ಬೆಂಕಿ ಹಚ್ಚಿದ ತಂದೆ

ರಾಜಸ್ಥಾನ: ಮಗಳು ಕತ್ತು ಸೀಳಿ ಕೊಲೆ ಮಾಡಿ, ದೇಹಕ್ಕೆ ಬೆಂಕಿ ಹಚ್ಚಿದ ತಂದೆ

ರಾಜಸ್ಥಾನ: ಮಗಳ ಕತ್ತು ಸೀಳಿ ಕೊಲೆ ಮಾಡಿ, ತಂದೆಯೊಬ್ಬ ಆಕೆಯ ದೇಹಕ್ಕೆ ಬೆಂಕಿ ಇಟ್ಟಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.

ನಿರ್ಮಲಾ (32) ಮೃತ ದುರ್ದೈವಿ.

ಆರೋಪಿ ಶಿವಲಾಲ್ ಮೇಘವಾಲ್ 12 ವರ್ಷಗಳಿಂದ ಕುಟುಂಬದಿಂದ ಪ್ರತ್ಯೇಕವಾಗಿ ಪಾಲಿನಲ್ಲಿ ವಾಸಿಸುತ್ತಿದ್ದ. ಅವರ ಪತ್ನಿ ಮತ್ತು ಮಕ್ಕಳು ಗುಜರಾತ್‌ ನಲ್ಲಿ ನೆಲೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ತನ್ನ ಕುಟುಂಬದಲ್ಲಿ ಆಗುತ್ತಿರುವ ಭಿನ್ನಾಭಿಪ್ರಾಯಕ್ಕೆಲ್ಲಾ ತನ್ನ ಹಿರಿಯ ಮಗಳು ಕಾರಣ ಎಂದು ಆತ ನಂಬಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.

ನಿರ್ಮಲಾ ಸೋಮವಾರ ಪಾಲಿನ ಇಸಲಿ ಗ್ರಾಮಕ್ಕೆ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದಾಗ ಆಕೆಯ ತಂದೆ ಭೇಟಿಯಾಗಿದ್ದರು. ನಂತರ ಸಂತ್ರಸ್ತೆ ಮತ್ತು ಆಕೆಯ ತಂಗಿಯನ್ನು ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಕೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಿರಿಯ ಮಗಳಿಗೆ ಅಲ್ಲೇ ಕಾಯುವಂತೆ ಹೇಳಿ, ನಿರ್ಮಲಾಳೊಂದಿಗೆ ಏಕಾಂತ ಸ್ಥಳಕ್ಕೆ ಹೋಗಿ ಕತ್ತು ಸೀಳಿ ಕೊಲೆ ಮಾಡಿ ಬಳಿಕ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ ಎಂದು ಹೇಳಲಾಗಿದೆ.

ಮೇಘವಾಲ್ ಹಿಂದಿರುಗಿದಾಗ ಆತನ ಕೈಯಲ್ಲಿ ರಕ್ತದ ಕಲೆ ಇರುವುದನ್ನು ಮತ್ತೊಬ್ಬ ಮಗಳು ನೋಡಿದ್ದಾಳೆ. ಬಳಿಕ ಅರ್ಧ ಸುಟ್ಟ ದೇಹವನ್ನು ಕೂಡ ನೋಡಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular