ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಭಾನುವಾರದವರೆಗೂ ಮಳೆಯಾಗಲಿದೆ. ಅದು ಭಾರೀ ಮಳೆಯ ವಾತಾವರಣವಂತೂ ಎಲ್ಲಿ ಇಲ್ಲ. ಸಾಧಾರಣ ಮಳೆ ಐದು ದಿನ ಕಾಲ ಕರ್ನಾಟಕದಲ್ಲಿ ಇರಲಿದೆ. ನವೆಂಬರ್ ೨೯ರ ಬುಧವಾರದಿಂದ ಡಿಸೆಂಬರ್ ೩ ರ ಭಾನುವಾರ ವರೆಗಿನ ಹವಾಮಾನ ಮುನ್ಸೂಚನೆಯ ವರದಿಯನ್ನು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ಬಿಡುಗಡೆ ಮಾಡಿದೆ.
ಈ ಪ್ರಕಾರ ನವೆಂಬರ್ ೨೯ರ ಬುಧವಾರ ಕರ್ನಾಟಕದ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳಿವೆ. ಅದೇ ರೀತಿ ನವೆಂಬರ್ ೩೦ ರ ಗುರುವಾರದಂದು ಕರ್ನಾಟಕದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸೂಚನೆ ನೀಡಲಾಗಿದೆ.
ಡಿಸೆಂಬರ್ ೦೧ ವರೆಗೆ ರಾಜ್ಯದಾದ್ಯಂತ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ನಂತರ ರಾಜ್ಯದಲ್ಲಿ ಮಳೆಯ ಕಡಿಮೆಯಾಗುವ ಸಾಧ್ಯತೆಯಿದೆ.