ಮಂಡ್ಯ: ಪಂಚ ರಾಜ್ಯ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿ ವಿಚಾರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀವಿ ಅಂದಿದ್ರು, ಮಾಡೋಕೆ ಆಗಿಲ್ಲ. ದಕ್ಷಿಣ ಭಾರತದ ೫ ರಾಜ್ಯಗಳಲ್ಲಿ ಬಿಜೆಪಿಗೆ ಪೂರ್ಣ ಬಾಗಿಲು ಮುಚ್ಚಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ತೆಲಂಗಾಣದಲ್ಲಿ ೧೫ ವರ್ಷದಿಂದ ನಾವು ಜಿರೋ. ಹಲವು ಕ್ಷೇತ್ರದಲ್ಲಿ ಕಾರ್ಯಕರ್ತರು ಇಲ್ಲ ಎಂದು ಹೇಳ್ತಾ ಇದ್ರು. ನಾವು ಅಲ್ಲಿಗೆ ಎಂಟ್ರಿ ಆಗಲು ಆಗಲ್ಲ ಅಂತಾ ಇದ್ರು. ಜನ ತೀರ್ಮಾನ ಮಾಡಿದ್ರೆ ಏನು ಬೇಕಾದ್ರ ಸಾಧ್ಯ. ತೆಲಂಗಾಣದ ಜನರು ಈ ಬಗ್ಗೆ ತೀರ್ಪು ನೀಡಿದ್ದಾರೆ. ದಕ್ಷಿಣ ಭಾರತದಿಂದ ಪ್ರಾರಂಭವಾಗಿದೆ, ಇದು ದೆಹಲಿಗೆ ಮುಟ್ಟುತ್ತೆ. ೧೦೦ಕ್ಕೆ ೧೦೦ ಲೋಕಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ತೆಲಂಗಾಣದ ಫಲಿತಾಂಶ ಇಡೀ ದೇಶದ ಮೇಲೆ ಪ್ರಭಾವ ಬೀರುತ್ತೆ. ಇದರಿಂದ ಲೋಕಸಭೆಯಲ್ಲಿ ನಮಗೆ ಒಳ್ಳೆಯದು ಆಗುತ್ತೆ ಎಂದು ಹೇಳಿದರು.
ಸರ್ಕಾರ ಇನ್ನು ಟೇಕ್ ಆಫ್ ಆಗಿಲ್ಲ ಎಂಬ ಆರ್ ಅಶೋಕ್ ಹೇಳಿಕೆ ವಿಚಾರ. ಆರ್ ಅಶೋಕ್ ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು. ಅಶೋಕ್ ಗೆ ೬ ತಿಂಗಳು ಆಗಿದೆ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯಲು. ಸದನ ಮುಗಿದ ಮೇಲೆ ಏನ್ ಹೇಳ್ತಾರೆ ಅವ್ರು ಕೇಳಿ. ಬರ ಸೇರಿದಂತೆ ಎಲ್ಲಾ ಸಂದರ್ಭದಲ್ಲಿ ರೈತರ ಜೊತೆ ನಾವು ನಿಂತಿದ್ದೇವೆ. ಪಾಪ ಆರ್ ಅಶೋಕ್ ಮತ್ತು ಜೆಡಿಎಸ್ ನವ್ರು ನಮ್ಮನ್ನ ಕಟ್ಟಾಕಲು ನಿಂತಿದ್ದಾರೆ.
ವರ್ಗಾವಣೆ ವಿಚಾರ: ಜೆಡಿಎಸ್ ಮತ್ತು ಬಿಜೆಪಿಯವ್ರು ಏನು ವರ್ಗಾವಣೆ ಮಾಡೇ ಇಲ್ಲಾ ಕಣ್ರಿ, ಅವ್ರಿಗೆ ವರ್ಗಾವಣೆ ಬಗ್ಗೆ ಏನು ಗೊತ್ತೇ ಇಲ್ಲಾ ಕಣ್ರಿ ವರ್ಗಾವಣೆ ಬಗ್ಗೆ ಚಲುವರಾಯಸ್ವಾಮಿ ವ್ಯಂಗ್ಯ.
ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟ ಮಾಡ್ತೇವೆ ಎಂಬ ಬಿವೈ ವಿಜಯೇಂದ್ರ ಹೇಳಿಕೆ ವಿಚಾರ. ಹೇಳಿದಾಗೆಲ್ಲ ಮಾಡೋಕಾಗತ್ತಾ.? ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಪಾಪ ಅವ್ರು ಹಾಗೆ ಹೇಳದಿದ್ರೆ ಆ ಸ್ಥಾನದಲ್ಲಿ ಇರಲು ಬಿಡ್ತಾರಾ? ತೆಲಂಗಾಣದ ಫಲಿತಾಂಶ ಈಡಿ ದೇಶದ ಚುನಾವಣೆ ಮೇಲೆ ಪರಿಣಾಮ ಬೀರತ್ತೆ. ಪಕ್ಷಕ್ಕೆ ಇಬ್ಬರು ಈಗ ಬಂದಿದ್ದಾರೆ ಮತ್ತೆ ಯಾರ್ ಬಂದ್ರು ಕರೆದುಕೊಳ್ತಿವಿ. ನಾವು ಯಾರಿಗೂ ಗಾಳ ಹಾಕಲ್ಲ ಬಂದ್ರೆ ಸೇರಿಸಿಕೊಳ್ತಿವಿ ಎಂದು ಹೇಳಿದರು.