Thursday, May 22, 2025
Google search engine

Homeರಾಜ್ಯಸುದ್ದಿಜಾಲಗ್ಯಾರಂಟಿ ಯೋಜನೆ ಕರ್ನಾಟಕದಲ್ಲಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ: ರೇಣುಕಾಚಾರ್ಯ

ಗ್ಯಾರಂಟಿ ಯೋಜನೆ ಕರ್ನಾಟಕದಲ್ಲಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ: ರೇಣುಕಾಚಾರ್ಯ

ತುಮಕೂರು: ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ವ್ಯತ್ಯಾಸ ಆಗಿತ್ತು ಮೂರು ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ವಿಚಾರ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ಕೆಲ ಮಾನದಂಡ ಅನುಸರಿಸಿದ್ದರು. ಹಾಗಾಗಿ ಸೋಲು ಅನುಭವಿಸಬೇಕಾಯಿತು.
ಎಂದು ತುಮಕೂರಿನಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದರು.

ಅದರ ಬಳಕ ಆ ಸೋಲಿನ ಆತ್ಮಾವಲೋಕನ ಮಾಡಿಕೊಂಡು ಪಂಚರಾಜ್ಯ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ ಕೆಲ ಮಾನದಂಡಗಳನ್ನ ಬದಲಾಯಿಸಿ ಕಾರ್ಯಕ್ರಮ ರೂಪಿಸಿ ಸ್ಥಳೀಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು. ಅಚಂಡ ಬಹುಮತದಿಂದ ಮೂರು ರಾಜ್ಯದಲ್ಲಿ ಗೆದಿದ್ದಿವಿ ಎಂದು ಹೇಳಿದರು. ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸಗಡ್‌ದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ರಾಜ್ಯಸ್ಥಾನದಲ್ಲಿ ಸ್ವಜನ ಪಕ್ಷಪಾತ ವ್ಯಾಪಕ ಭ್ರಷ್ಟಾಚಾರದಿಂದ ಕಾಂಗ್ರೆಸ್ ನೆಲಕಚ್ಚಿದೆ. ನಿನ್ನೆ ಬಂದ ಫಲಿತಾಂಶ ಲೋಕಸಭೆ ಚುನಾವಣೆಯ ಸೆಮಿಫೈನಲ್. ಭಾರತದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯನ್ನ ಜನರು ಭಯಸಿದ್ದಾರೆ ಅನ್ನೋದಕ್ಕೆ ದಿಕ್ಸೂಚಿ ಇದು.

ಕಾಂಗ್ರೆಸ್‌ನ ಗ್ಯಾರಂಟಿ ಎಲ್ಲೂ ವರ್ಕೌಟ್ ಆಗಿಲ್ಲ. ಗ್ಯಾರಂಟಿ ಯೋಜನೆಯನ್ನ ಕರ್ನಾಟಕದಲ್ಲಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಜಮೀರ್ ಅಹ್ಮದ್ ಹೇಳಿಕೆ ವಿಚಾರ ಮುಸ್ಲಿಂ ಸ್ವೀಕರ್‌ಗೆ ಕೈ ಮುಗಿಯುವಂತೆ ಮಾಡಿದಿವಿ ಎಂದು ಜಮೀರ್ ಹೇಳ್ತಾರೆ. ಅವರನ್ನ ಕೂಡಲೇ ಸರ್ಕಾರದಿಂದ ವಜಾ ಮಾಡಬೇಕು. ಈ ಬಗ್ಗೆ ವಿಪಕ್ಷ ನಾಯಕರು, ರಾಜ್ಯಾಧ್ಯಕ್ಷರು ಸದನದಲ್ಲಿ ಧ್ವನಿ ಎತ್ತಕಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular