ಕೊಳ್ಳೇಗಾಲ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಪಟ್ಟಣ ಪೊಲೀಸರು ಬಂಧಿಸಿ,ಆರೋಪಿಯಿಂದ ಗೂಡ್ಸ್ ವಾಹನದಲ್ಲಿ ೮ ಚೀಲದಲ್ಲಿದ್ದ ಅಕ್ಕಿಯನ್ನು ಜಪ್ತಿ ಮಾಡಲಾಯಿತು. ಆರೋಪಿಯು ಟಿ.ನರಸೀಪುರ ತಾಲ್ಲೂಕಿನ ಹಳೇ ನರೀಪುರ ಗ್ರಾಮದ ಅಸ್ಗರ್(೪೪) ಎನ್ನಲಾಗಿದೆ. ಈತ ಸಾಗಿಸುತ್ತಿದ್ದ ಎಂಟು ಪ್ಲಾಸ್ಟಿಕ್ ಚೀಲದಲ್ಲಿದ್ದ ಒಟ್ಟು ೨೪೬ ಕೆಜಿ ತೂಕದ ಅಕ್ಕಿಯನ್ನು ಜಪ್ತಿ ಮಾಡಲಾಯಿತು.
ಈತನು ಕೊಳ್ಳೇಗಾಲದಿಂದ ಟಿ.ನರಸೀಪುರದ ಕಡೆಗೆ ಸಾಗಾಣಿಕೆ ಮಾಡುವಾಗ ಉಪ್ಪಾರ ಮೋಳೆ ಹಾಗೂ ದಾಸನಪುರ ರಸ್ತೆಯಲ್ಲಿ ಗೂಡ್ಸ್ ವಾಹನದಲ್ಲಿ ಪಡಿತರ ಅಕ್ಕಿ ಚೀಲಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವಾಗ ಆಹಾರ ನಿರೀಕ್ಷಕ ಪ್ರಸಾದ್ ಹಾಗೂ ಪಟ್ಟಣ ಠಾಣೆಯ ಪಿಎಸ್‌ಐ ಮಹೇಶ್ ಕುಮಾರ್ ತಮ್ಮ ಸಿಬ್ಬಂದಿಗಳ ಜೊತೆ ದಾಳಿ ನಡೆಸಿ ಅಕ್ಕಿಯನ್ನು ಜಪ್ತಿ ಮಾಡಲಾಯಿತು.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.