ಕೆ. ಆರ್.ನಗರ : ಅಪರಾಧ ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸ್ಪಂದಿಸಿ, ಕಾನೂನುಗಳ ಅರಿವು ಹೊಂದಬೇಕಾದ ಅಗತ್ಯ ಇದೆ ಎಂದು ಪಟ್ಟಣದ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪಿ.ಪಿ. ಸಂತೋಷ್ ತಿಳಿಸಿದರು. ಅವರು ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ಕೆ.ಆರ್.ನಗರ ಪೊಲೀಸ್ ಠಾಣೆ ಮತ್ತು ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ಅಪರಾದ ತಡೆ ಮಾಸಾಚರಣೆ ಹಾಗೂ ರಸ್ತೆ ಸಂಚಾರ ನಿಯಮ ಪಾಲಿಸಿ ಅಪಘಾತ ತಪ್ಪಸಿ ಅಭಿಯಾನದ ಜಾಥಗೆ ಚಾಲನೇ ನೀಡಿ ಮಾತನಾಡಿದರು.
ಅಪರಾಧ ತಡೆಗಟ್ಟುವಲ್ಲಿ ಎಲ್ಲರೂ ಸಹಕರಿಸಬೇಕು. ದೇಶದ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ವ್ಯವಸ್ಥೆ ಕಲ್ಪಿಸಲು ಸಾದ್ಯವಿಲ್ಲ, ಹೀಗಿರುವಾಗ ಪೊಲೀಸ್ ಇಲಾಖೆನೇ ಎಲ್ಲ ಅಪರಾಧ ತಡೆಗಟ್ಟಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರ ಬೇಕೆಂದ ಅವರು ಕೋರಿದರು.
ಬಹುತೇಕ ಅಪರಾಧಗಳಿಗೆ ಆಯಾ ಸಂದರ್ಭಗಳಲ್ಲಿ ಸೃಷ್ಟಿಯಾದ ಸನ್ನಿವೇಶಗಳು ಅಪರಾಧ ಮಾಡಲು ಅವಕಾಶ ನೀಡುತ್ತವೆ. ಬಲವಾದ ಅಪರಾಧಿ ಅಪರಾಧ ತಡೆ ನಿಮ್ಮಿಂದ ಆರಂಭಗೊಳ್ಳುತ್ತದೆ. ಸಾಮಾನ್ಯ ತಿಳುವಳಿಕೆಯಿಂದ ಮತ್ತು ಅಪರಾಧ ತಡೆಗಟ್ಟುವ ತಂತ್ರಗಳನ್ನು ರೂಢಿಸಿಕೊಳ್ಳುವುದರಿಂದ ಅಪರಾಧ ಮಾಡುವುದನ್ನು ಅತ್ಯಂತ ಕಡಿಮೆಗೊಳಿಸಬಹುದು ಎಂದು ಮಾಹಿತಿ ನೀಡಿದರು.
ಅಪರಾಧವನ್ನು ತಡೆಗಟ್ಟುವುದರಿಂದ ಜೀವನ ಪೂರ್ತಿ ಆಗುವ ವಿಷಾದವನ್ನು ತಡೆಗಟ್ಟಬಹುದು. ನೀವು ಮೋಟಾರು ವಾಹನ ಓಡಿಸುವಾಗ ಎಚ್ಚರಿಕೆಯಿಂದ ಹಾಗೂ ಸ್ವರಕ್ಷಣೆಯಿಂದ ಓಡಿಸಬೇಕು. ವಾಹನ ಚಲಿಸುವಾಗ ನಿಮ್ಮನ್ನು ನೋಡದೆ ಬರುವ ಬೇರೆ ವಾಹನ ಚಾಲಕರ ಕಡೆಗೆ ನಿಮ್ಮ ಗಮನವಿರಲಿ. ವಾಹನದಲ್ಲಿರುವಾಗ ನಿಮ್ಮ ಸೀಟಿನ ಬೆಲ್ಟ್ಗಳನ್ನು ಹಾಕಿಕೊಂಡಿರಿ. ಮತ್ತು ಇತರರಿಗೂ ಹಾಕಿಕೊಳ್ಳುವಂತೆ ಸೂಚಿಸಿ. ಹಳೆಯ ರಕ್ಷಣಾ ಸಂದೇಶಗಳು ಇಂದಿಗೂ ಸಹ ಅರ್ಥ ಪೂರ್ಣವಾಗಿದೆ. ಸೀಟ್ ಬೆಲ್ಟ್ ಹಾಕಿಕೊಳ್ಳಿ ಜೀವ ಉಳಿಸಿಕೊಳ್ಳಿ ವಾಹನ ಅಪಘಾತ ತಡೆಗಟ್ಟಲು ಮತ್ತು ಆಗುವ ಗಾಯಗಳನ್ನು ಕಡೆಮೆಗೊಳಿಸಲು ನೀವು ಮತ್ತು ನಿಮ್ಮ ಕುಟುಂಬದವರು ನಿಮ್ಮ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಆಗಾಗ ಸಂಭವಿಸುವ ವಾಹನ ಅಪಘಾತಕ್ಕೆ ಗುರಿಯಾದವರು ಗಾಯಗೊಳ್ಳುತ್ತಾರೆ ಅಥವಾ ಸಾಯುತ್ತಾರೆ.
ವಾಹನದ ಹೊರಗೆ ಅಥವಾ ಒಳಗೆ ಅಪಘಾತದ ರಭಸಕ್ಕೆ ಸಿಲುಕಿ ಹಾಕಿಕೊಂಡು ನುಚ್ಚುನೂರಾಗುತ್ತಾರೆ. ಪ್ರಮಾಣಿಕವಾಗಿ ಹೇಳವುದಾದರೆ ಸೀಟ್ ಬೆಲ್ಟ್ಗಳ ಬಳಕೆ ಸಾವು ಮತ್ತು ಬದುಕಿನ ಅಂತರವನ್ನು ನಿರ್ಧರಿಸುತ್ತವೆ. ಎಂದರಲ್ಲದೆ ಎಲ್ಲಾ ಸಮಯದಲ್ಲೂ ಎಚ್ಚರಿಕೆಯಿಂದ ಚಾಲನೆ ಮಾಡಿ. ಅಪಾಯಕಾರಿ ಹವಾಮಾನ ಮತ್ತು / ಅಥವಾ ರಸ್ತೆ ಪರಿಸ್ಥಿತಿಗಳು ಇದ್ದಾಗ ಹೆಚ್ಚುವರಿ ಎಚ್ಚರಿಕೆಯಿಂದ ಬಳಸಿ. ನೀವು ದಣಿದಿದ್ದರೆ ಅಥವಾ ನೀವು ದೈಹಿಕವಾಗಿ ಅಥವಾ ಮಾನಸಿಕವಾಗಿ ದುರ್ಬಲರಾಗಿದ್ದರೆ ವಾಹನ ಚಲಾಯಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾಲೇಜು ಪ್ರಾಂಶುಪಾಲ ಜಯಕುಮಾರ್, ರೋಟರಿ ಅಧ್ಯಕ್ಷ ನಾಗರಾಜು ಬಾವಿಕಟ್ಟಿ, ಸಬ್ ಇನ್ಸ್ ಪೆಕ್ಟರ್ ಗಳಾದ ಧನರಾಜ್, ನಂಜಪ್ಪ, ಅಚ್ಯುತ, ಮುಖ್ಯಪೇದೆ ಮಂಜು, ಕಾಲೇಜು ಉಪನ್ಯಾಸಕರು, ರೋಟರಿ ಕ್ಲಬ್ ಸದಸ್ಯರು ಸೇರಿ ನೂರಾರು ವಿಧ್ಯಾರ್ಥಿಗಳು ಭಾಗವಹಿಸಿದ್ದರು.